ರೈತರಿಗೆ ತ್ವರಿತವಾಗಿ ನಬಾರ್ಡ್ ಸಾಲ ಸೌಲಭ್ಯ ನೀಡುತ್ತಿದೆ. ರಾಜ್ಯದ ಕಟ್ಟಕಡೆಯ ರೈತನಿಗೂ ಈ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ ಆಶಯ
ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ
ಚೆಕ್ ಹಸ್ತಾಂತರ
ನಬಾರ್ಡ್‌ನ ಅಂಗ ಸಂಸ್ಥೆಯಾದ ನ್ಯಾಬ್ ಕಿಸಾನ್ ಎರಡು ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಚೆಕ್ ಅನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಿತು. ವಿಜಯಪುರ ಜಿಲ್ಲೆಯ ವಾಗ್ದೇವಿ ಎಫ್‌ಪಿಒಗೆ ₹50 ಲಕ್ಷ ಮತ್ತು ಬೆಳಗಾವಿ ಜಿಲ್ಲೆಯ ಶ್ರೀ ಪಂಚಲಿಂಗೇಶ್ವರ ಎಫ್‌ಪಿಒಗೆ ₹45 ಲಕ್ಷದ ಮೊತ್ತದ ಚೆಕ್ ಅನ್ನು ನೀಡಿತು. ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಈ ಸಾಲದ ನೆರವು ನೀಡಲಾಗಿದೆ.