ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು, ಉದ್ಯಮಿಗಳು, ರೈತರಿಗೆ ಸಾಲ: ‘ಜನ ಸಮರ್ಥ್‘ ಪೋರ್ಟಲ್‌ಗೆ ಪ್ರಧಾನಿ ಚಾಲನೆ

Last Updated 7 ಜೂನ್ 2022, 6:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಬ್ಯಾಂಕ್‌ಗಳು ಹಾಗೂ ಕರೆನ್ಸಿಯನ್ನು ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟುಗಳ ಮುಖ್ಯ ಭಾಗವಾಗಿ ಬೆಳೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಣಕಾಸಿನ ಒಳಗೊಳ್ಳುವಿಕೆಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ವೇದಿಕೆಗಳನ್ನು ಜಾಗತಿಕ ಮಟ್ಟಕ್ಕೆ ಒಯ್ಯುವ ಪ್ರಯತ್ನವೂ ಆಗಬೇಕು ಎಂದು ಅವರು ಹೇಳಿದರು. ‘ಇಂದು ಜಗತ್ತು ಭಾರತವನ್ನು ಒಂದು ದೊಡ್ಡ ಮಾರುಕಟ್ಟೆಯಾಗಷ್ಟೇ ನೋಡುತ್ತಿಲ್ಲ. ಬದಲಿಗೆ, ಸೃಜನಶೀಲ ಹಾಗೂ ಸಮರ್ಥ ವ್ಯವಸ್ಥೆಯನ್ನು ಹೊಂದಿರುವ ದೇಶವನ್ನಾಗಿ ಕಾಣುತ್ತಿದೆ’ ಎಂದರು.

ಯುವಕರಿಗೆ, ಉದ್ಯಮಿಗಳಿಗೆ ಮತ್ತು ರೈತರಿಗೆ ಸಾಲ ಪಡೆಯುವುದನ್ನು ಸುಲಭವಾಗಿಸುವ ‘ಜನ ಸಮರ್ಥ್’ ಪೋರ್ಟಲ್‌ಗೆ ಮೋದಿ ಅವರು ಚಾಲನೆ ನೀಡಿದರು. ಈ ಪೋರ್ಟ‌ಲ್ ಮೂಲಕ 13 ಯೋಜನೆಗಳ ಪ್ರಯೋಜನ ಪಡೆಯಬಹುದು.

ಈ ಪೋರ್ಟಲ್‌ನ ಕಾರಣದಿಂದಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಪಡೆಯಲು ಮುಂದೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನ ಸಮರ್ಥ್ ಪೋರ್ಟಲ್‌ನಲ್ಲಿ 13 ಯೋಜನೆಗಳ ವಿವರ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಈ ಪೋರ್ಟಲ್‌ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ತರಲಾಗುವುದು ಎಂದು ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ದಾಸ್ ತಿಳಿಸಿದರು.

‘ಜನ ಸಮರ್ಥ್’ ಪೋರ್ಟಲ್‌:https://www.jansamarth.in/home

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT