ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ತೆರಿಗೆಯ ನಿವ್ವಳ ಸಂಗ್ರಹ ಹೆಚ್ಚಳ

Last Updated 16 ಜೂನ್ 2021, 14:06 IST
ಅಕ್ಷರ ಗಾತ್ರ

ನವದೆಹಲಿ: 2021–22ನೇ ಹಣಕಾಸು ವರ್ಷದ ಏಪ್ರಿಲ್‌ 1 ರಿಂದ ಜೂನ್‌ 15ವರೆಗಿನ ಅವಧಿಯಲ್ಲಿ ನೇರ ತೆರಿಗೆಯ ನಿವ್ವಳ ಸಂಗ್ರಹವು ₹ 1,85,871 ಕೋಟಿ ಆಗಿದೆ.

ಹಿಂದಿನ ಹಣಕಾಸು ವರ್ಷ ಇದೇ ಅವಧಿಯಲ್ಲಿ ₹ 92,762 ಕೋಟಿ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಶೇ 100.4ರಷ್ಟು ಏರಿಕೆ ಕಂಡುಬಂದಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಬುಧವಾರ ಮಾಹಿತಿ ನೀಡಿದೆ.

ನೇರ ತೆರಿಗೆಯ ನಿವ್ವಳ ಸಂಗ್ರಹದಲ್ಲಿ ₹ 74,356 ಕೋಟಿ ಕಾರ್ಪೊರೇಟ್‌ ಆದಾಯ ತೆರಿಗೆ ಹಾಗೂ ಷೇರು ವಹಿವಾಟು ತೆರಿಗೆಯನ್ನೂ (ಎಸ್‌ಟಿಟಿ) ಒಳಗೊಂಡು ವೈಯಕ್ತಿಕ ಆದಾಯ ತೆರಿಗೆ ಮೊತ್ತ ₹ 1.11 ಲಕ್ಷ ಕೋಟಿಗೂ ಅಧಿಕ ಇದೆ.

ನೇರ ತೆರಿಗೆಗಳ ಸರಾಸರಿ ಸಂಗ್ರಹವು ₹ 2.16 ಲಕ್ಷ ಕೋಟಿಗಳಷ್ಟಾಗಿದೆ. ಕಳೆದ ಬಾರಿ ₹ 1.37 ಲಕ್ಷ ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 57ರಷ್ಟು ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT