ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದಾಜಿಗಿಂತ ಹೆಚ್ಚಿನ ತೆರಿಗೆ ಸಂಗ್ರಹ: ₹ 9.45 ಲಕ್ಷ ಕೋಟಿ

Last Updated 9 ಏಪ್ರಿಲ್ 2021, 14:19 IST
ಅಕ್ಷರ ಗಾತ್ರ

ನವದೆಹಲಿ: ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸಂಗ್ರಹವಾಗಿರುವ ನೇರ ತೆರಿಗೆಗಳ ಒಟ್ಟು ಮೊತ್ತ ₹ 9.45 ಲಕ್ಷ ಕೋಟಿ. ಇದು ಕೇಂದ್ರ ಬಜೆಟ್‌ನ ಪರಿಷ್ಕೃತ ಅಂದಾಜಿಗಿಂತ ಶೇಕಡ 5ರಷ್ಟು ಜಾಸ್ತಿ.

2020–21ನೆಯ ಸಾಲಿನಲ್ಲಿ ಆದಾಯ ತೆರಿಗೆ ರೂಪದಲ್ಲಿ ಸಂಗ್ರಹಿಸಿರುವ ಮೊತ್ತವು ಪರಿಷ್ಕೃತ ಅಂದಾಜಿಗಿಂತಲೂ ಹೆಚ್ಚಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ಪಿ.ಸಿ. ಮೋದಿ ಶುಕ್ರವಾರ ತಿಳಿಸಿದರು.

ಹಿಂದಿನ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ಒಟ್ಟು ಕಾರ್ಪೊರೇಟ್ ತೆರಿಗೆಯ ಮೊತ್ತ ₹ 4.57 ಲಕ್ಷ ಕೋಟಿ, ವೈಯಕ್ತಿಕ ಆದಾಯ ತೆರಿಗೆ ಮೊತ್ತ ₹ 4.71 ಲಕ್ಷ ಕೋಟಿ. ಒಟ್ಟು ₹ 16,927 ಕೋಟಿಯು ಷೇರುಗಳ ಖರೀದಿ, ಮಾರಾಟ ಮೇಲಿನ ತೆರಿಗೆಯಿಂದ ಸರ್ಕಾರಕ್ಕೆ ಸಂದಾಯವಾಗಿದೆ.

ಪರಿಷ್ಕೃತ ಅಂದಾಜಿನಲ್ಲಿ ನೇರ ತೆರಿಗೆ ರೂಪದಲ್ಲಿ ₹ 9.05 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಈಗ ಸಂಗ್ರಹ ಆಗಿರುವ ಮೊತ್ತವು 2019–20ರಲ್ಲಿ ಸಂಗ್ರವಾಗಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 10ರಷ್ಟು ಕಡಿಮೆ.

ತೆರಿಗೆ ಪಾವತಿ ಮಾಡುವವರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೋದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT