ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಿ ತ್ವರಿತಕ್ಕೆ ಕ್ರಮ

22 ಬ್ಯಾಂಕ್‌ಗಳಿಂದ ಒಪ್ಪಂದಕ್ಕೆ ಸಹಿ
Last Updated 23 ಜುಲೈ 2018, 19:30 IST
ಅಕ್ಷರ ಗಾತ್ರ

ಮುಂಬೈ: ವಸೂಲಾಗದ ಸಾಲದ ಸಮಸ್ಯೆಗೆ (ಎನ್‌ಪಿಎ) ತ್ವರಿತ ಪರಿಹಾರ ಕಂಡುಕೊಳ್ಳಲು ಬ್ಯಾಂಕ್‌ಗಳು ಒಪ್ಪಂದಕ್ಕೆ ಬಂದಿವೆ.

₹ 500 ಕೋಟಿಗಿಂತ ಕಡಿಮೆ ಮೊತ್ತದ ಸಾಲಗಳ ವಸೂಲಿ ಕ್ರಮ ತ್ವರಿತಗೊಳಿಸಲು ಒಟ್ಟು 22 ಬ್ಯಾಂಕ್‌ಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಇವುಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇವೆ.

ಈ ತ್ವರಿತ ಸಾಲ ವಸೂಲಾತಿ ಕ್ರಮವು, ಬ್ಯಾಂಕ್‌ಗಳನ್ನು ‘ಎನ್‌ಪಿಎ’ ಬಿಕ್ಕಟ್ಟಿನಿಂದ ಪಾರು ಮಾಡುವ ‘ಸಶಕ್ತ’ ಯೋಜನೆಯ ಅಂಗವಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಸುನಿಲ್‌ ಮೆಹ್ತಾ ನೇತೃತ್ವದಲ್ಲಿನ ಮೂವರು ಸದಸ್ಯರು ಸಮಿತಿ ಸಲ್ಲಿಸಿದ ಶಿಫಾರಸಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಲ ವಸೂಲಿಗೆ ಸಂಘಟಿತ ಪ್ರಯತ್ನ ನಡೆಸಲೂ ಈ ಒ‍ಪ್ಪಂದ ನೆರವಾಗಲಿದೆ.

‘ಸರ್ಕಾರಿ ಸ್ವಾಮ್ಯದ 18, ಖಾಸಗಿ ವಲಯದ 3 ಮತ್ತು ಎಕ್ಸಿಮ್‌ ಬ್ಯಾಂಕ್‌, ಈ ಒಪ್ಪಂದಕ್ಕೆ ಸಹಿ ಹಾಕಿವೆ. ಬಹುತೇಕ ಬ್ಯಾಂಕ್‌ಗಳು ತಮ್ಮ ಆಡಳಿತ ಮಂಡಳಿಗಳಿಂದ ಸಮ್ಮತಿ ಪಡೆದಿವೆ. ಇದೇ ತಿಂಗಳಾಂತ್ಯದ ಹೊತ್ತಿಗೆ ಒಪ್ಪಂದ ಜಾರಿಗೆ ಬರಲಿದೆ’ ಎಂದು ಸುನಿಲ್‌ ಮೆಹ್ತಾ ಹೇಳಿದ್ದಾರೆ.

‘₹ 50ಕೋಟಿಗಳಿಂದ ₹ 500 ಕೋಟಿವರೆಗಿನ ಎನ್‌ಪಿಎಗೆ ತ್ವರಿತ ಪರಿಹಾರ ಕಂಡುಕೊಳ್ಳುವುದು ಈ ಒಪ್ಪಂದದ ಉದ್ದೇಶವಾಗಿದೆ. ₹ 2,000 ಕೋಟಿಗಿಂತ ಹೆಚ್ಚಿನ ಮೊತ್ತದ ‘ಎನ್‌ಪಿಎ’ಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು. ಒಪ್ಪಂದವು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಫೆಬ್ರುವರಿ ತಿಂಗಳ ಸುತ್ತೋಲೆಗೆ ಅನುಗುಣವಾಗಿ ಇದೆ.

‘ಬ್ಯಾಂಕ್‌ ಒಕ್ಕೂಟಗಳ ಮುಂಚೂಣಿ ಬ್ಯಾಂಕ್‌, ಸಾಲ ವಸೂಲಾತಿ ಪ್ರಕ್ರಿಯೆ ಸಿದ್ಧಪಡಿಸುತ್ತದೆ. ಇತರ ಬ್ಯಾಂಕ್‌ಗಳು ಇದಕ್ಕೆ ಸಮ್ಮತಿ ನೀಡಬೇಕಾಗುತ್ತದೆ. ಬಹುಮತದ ದೊರೆತ ನಂತರ ಆ ನಿಯಮ ಉಳಿದ ಬ್ಯಾಂಕ್‌ಗಳಿಗೆ ಅನ್ವಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT