ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಯಶ್‌ ದಯಾಳ್‌ಗೆ ಪ್ರಶಸ್ತಿ ಸಮರ್ಪಿಸಿದ ಡುಪ್ಲೆಸಿ

Published 19 ಮೇ 2024, 23:30 IST
Last Updated 19 ಮೇ 2024, 23:30 IST
ಅಕ್ಷರ ಗಾತ್ರ

ಆರ್‌ಸಿಬಿ ತಂಡದ ನಾಯಕ ಶನಿವಾರದ ಪಂದ್ಯದಲ್ಲಿ ತಮಗೆ ಲಭಿಸಿದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬೌಲರ್ ಯಶ್ ದಯಾಳ್ ಅವರಿಗೆ ಸಮರ್ಪಿಸಿದ್ದಾರೆ. 

ಎಡಗೈ ವೇಗಿ ಯಶ್ ದಯಾಳ್ ಅವರು ಪಂದ್ಯದ ಫಲಿತಾಂಶಕ್ಕೆ ನಿರ್ಣಾಯಕವಾಗಿದ್ದ ಕೊನೆಯ ಓವರ್‌ನಲ್ಲಿ ಒತ್ತಡಕ್ಕೊಳಗಾಗದೇ ಉತ್ತಮವಾಗಿ ಬೌಲಿಂಗ್ ಮಾಡಿದರು. ಇದರಿಂದಾಗಿ ತಂಡವು 27 ರನ್‌ಗಳ ಜಯ ಸಾಧಿಸಲು ಸಾಧ್ಯವಾಯಿತು. 

ಮೊದಲು ಬ್ಯಾಟಿಂಗ್ ಮಾಡಿದ್ದ ಅರ್‌ಸಿಬಿಗೆ ಉತ್ತಮ ಆರಂಭವನ್ನು ಡುಪ್ಲೆಸಿ (54; 39ಎ) ಹಾಗೂ ವಿರಾಟ್ ಕೊಹ್ಲಿ (47 ರನ್) ನೀಡಿದ್ದರು. ಡುಪ್ಲೆಸಿ ಅವರ ಅರ್ಧಶತಕವು ಆ ಹಂತದಲ್ಲಿ ತಂಡಕ್ಕೆ ಆಸರೆಯಾಗಿತ್ತು. ಆದ್ದರಿಂದ  ತಂಡವು 218 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡವನ್ನು ಮಹೇಂದ್ರಸಿಂಗ್ ಧೋನಿ ಮತ್ತು ರವೀಂದ್ರ ಜಡೇಜ ಅವರು ಪ್ಲೇ ಆಫ್‌ ಸನಿಹಕ್ಕೆ ತಂದಿದ್ದರು. ಆದರೆ ಕೊನೆಯ ಓವರ್‌ನಲ್ಲಿ ಧೋನಿ ವಿಕೆಟ್ ಪಡೆದ ಯಶ್ ದಯಾಳ್ ತಿರುವು ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT