ನವದೆಹಲಿ: ಪ್ಯಾರಾ ಶಟ್ಲರ್ಗಳಾದ ಸುಕಾಂತ್ ಕದಮ್, ತರುಣ್ ಮತ್ತು ಸುಹಾಸ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಕದಮ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದು, ಪುರುಷರ ಎಸ್ಎಲ್ 4 ವಿಭಾಗದಲ್ಲಿ ಆಡಲಿದ್ದಾರೆ. ಅಲ್ಲದೇ, ತರುಣ್ ಮತ್ತು ಸುಹಾಸ್ ಕೂಡ ಇದೇ ವಿಭಾಗದಲ್ಲಿ ಅರ್ಹತೆ ಪಡೆದಿದ್ದಾರೆ.

ಎಸ್ಎಲ್ 3 ಮಹಿಳಾ ವಿಭಾಗದಲ್ಲಿ ಮನ್ದೀಪ್ ಕೌರ್ ಹಾಗೂ ಮಿಶ್ರ ಡಬಲ್ಸ್ ಎಸ್ಎಲ್ 6 ವಿಭಾಗದಲ್ಲಿ ನಿತ್ಯಾ ಮತ್ತು ಶಿವರಾಜನ್ ಕೂಡ ಸ್ಥಾನ ಪಡೆದಿದ್ದಾರೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ.

ಕದಮ್ ಕಳೆದ ಕೆಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುವ ಮೂಲಕ ನಿರಂತರವಾಗಿ ಪದಕಗಳನ್ನು ಗೆಲ್ಲುತ್ತಿದ್ದಾರೆ. ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದು ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಪಡೆದರು. ತರುಣ್ ಮತ್ತು ಸುಹಾಸ್ ಇಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

‘ನನ್ನ ಕನಸು ನನಸಾಗಿದೆ, ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಪಡೆಯಲು ನಾನು ನಿಜವಾಗಿಯೂ ಶ್ರಮಿಸಿದ್ದೇನೆ. ಪದಕ ಗೆದ್ದು ಭಾರತ ಹೆಮ್ಮೆಪಡುವಂತೆ ಮಾಡಲು ಬಯಸುತ್ತೇನೆ’ ಎಂದು ಕದಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.