ಸೋಮವಾರ, ಸೆಪ್ಟೆಂಬರ್ 28, 2020
20 °C

ಏರ್‌ಟೆಲ್‌ನಿಂದ ಹೊಸ ಕೊಡುಗೆ: ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಿಯೊ ಕಂಪನಿಯು ಫೈಬರ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆದವರಿಗೆ ಕಡಿಮೆ ದರಕ್ಕೆ ಅನಿಯಮಿತ ಪ್ಲ್ಯಾನ್‌ಗಳನ್ನು ಕೊಡಲು ಆರಂಭಿಸಿರುವ ಬೆನ್ನಲ್ಲೇ ಏರ್‌ಟೆಲ್‌ ಕೂಡ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಇಂತಹ ಪ್ಲ್ಯಾನ್‌ಗಳನ್ನು ಪ್ರಕಟಿಸಿದೆ.

ಆರಂಭಿಕ ಪ್ಲ್ಯಾನ್‌ನ ಶುಲ್ಕ ₹ 499. ಇದರಲ್ಲಿ 40 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಸಂಪರ್ಕ ಸಿಗಲಿದೆ. ₹ 799, ₹ 999 ಮತ್ತು ₹ 1,499 ಬೆಲೆಯ ಯೋಜನೆಗಳನ್ನೂ ಪ್ರಕಟಿಸಿದೆ. ₹ 999ರಿಂದ ₹ 3,999ರ ನಡುವಿನ ಪ್ಲ್ಯಾನ್‌ಗಳ ಜತೆ ಡಿಸ್ನಿ+ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ವಿಡಿಯೊ ಮತ್ತು ಜೀ5 ಕೂಡ ಲಭ್ಯವಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು