ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕರ ಆದಾಯ ₹ 10 ಸಾವಿರಕ್ಕಿಂತ ಕಡಿಮೆ

ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿ
Last Updated 29 ಮೇ 2022, 20:25 IST
ಅಕ್ಷರ ಗಾತ್ರ

ನವದೆಹಲಿ: ಅಸಂಘಟಿತ ವಲಯದ 27.69 ಕೋಟಿ ಕಾರ್ಮಿಕರು ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಿದ್ದು, ಇವರ ಪೈಕಿ ಶೇಕಡ 94.11ರಷ್ಟು ಮಂದಿಯ ತಿಂಗಳ ಆದಾಯ ₹ 10 ಸಾವಿರಕ್ಕಿಂತ ಕಡಿಮೆ. ಅಲ್ಲದೆ, ಇಷ್ಟು ಮಂದಿಯಲ್ಲಿ ಶೇ 74ರಷ್ಟು ಮಂದಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರು.

2021ರ ನವೆಂಬರ್‌ ಮಧ್ಯಭಾಗದಲ್ಲಿ ಇ–ಶ್ರಮ್ ಪೋರ್ಟಲ್‌ನಲ್ಲಿ ಅಸಂಘಟಿತ ವಲಯದ 8 ಕೋಟಿ ಕಾರ್ಮಿಕರು ನೋಂದಾಯಿತರಾಗಿದ್ದರು. ಆಗ ತಿಂಗಳಿಗೆ ₹ 10 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣವು ಶೇ 92.37ರಷ್ಟು ಆಗಿತ್ತು.

ದೇಶದ ಅಸಂಘಟಿತ ವಲಯದಲ್ಲಿ ಒಟ್ಟು 38 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಅಂದಾಜು ಇದೆ. ಇಷ್ಟೂ ಜನ ಇ–ಶ್ರಮ್ ಪೋರ್ಟಲ್‌
ನಲ್ಲಿ ನೋಂದಾಯಿತರಾದ ನಂತರ
ದಲ್ಲಿ ಸಮಾಜದಲ್ಲಿ ಇರುವ ತೀವ್ರ ಅಸಮಾನತೆಯು ಸ್ಪಷ್ಟವಾಗಿ ಗೊತ್ತಾಗ
ಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ದತ್ತಾಂಶ
ವನ್ನು ರೂಪಿಸುವ ಗುರಿಯನ್ನು ಇ–ಶ್ರಮ್ ಪೋರ್ಟಲ್ ಹೊಂದಿದೆ. ಅಸಂಘ
ಟಿತ ವಲಯದ ಅಷ್ಟೂ ಕಾರ್ಮಿಕರು ಇದೇ ವರ್ಷದೊಳಗೆ ಹೆಸರು ನೋಂದಾ
ಯಿಸಿಕೊಂಡಲ್ಲಿ, ಅವರಿಗಾಗಿ ಸೂಕ್ತ ನೀತಿಗಳನ್ನು ರೂಪಿಸಲು ದೇಶದ ನಾಯಕತ್ವಕ್ಕೆ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಕೂಡ ತಜ್ಞರಲ್ಲಿ ಇದೆ.

ಶೇ 4.36ರಷ್ಟು ಮಂದಿಯ ತಿಂಗಳ ಆದಾಯವು ₹ 10 ಸಾವಿರದಿಂದ ₹ 15 ಸಾವಿರದ ನಡುವೆ ಇದೆ. ಪೋರ್ಟಲ್‌ನಲ್ಲಿ ನೋಂದಣಿ ಆಗಿರುವವರಲ್ಲಿ ಶೇ 45.32ರಷ್ಟು ಮಂದಿ ಒಬಿಸಿ, ಶೇ 20.95ರಷ್ಟು ಮಂದಿ ಎಸ್‌ಸಿ ಹಾಗೂ ಶೇ 8.17ರಷ್ಟು ಮಂದಿ ಎಸ್‌ಟಿ ಸಮುದಾಯಗಳಿಗೆ ಸೇರಿದ
ವರು. ಸಾಮಾನ್ಯ ವರ್ಗಕ್ಕೆ ಸೇರಿದವರ ಪ್ರಮಾಣ ಶೇ 25.56ರಷ್ಟು, ಮಹಿಳೆ
ಯರ ಪ್ರಮಾಣ ಶೇ 52.81, ಪುರುಷರ ಪ್ರಮಾಣ ಶೇ 47.19ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT