ಟೋಕಿಯೊ: ಇಲ್ಲಿ ನಡೆದ ವಿಶ್ವ ಜಾವೆಲಿನ್ ಚಾಂಪಿಯನ್ಶಿಪ್ ಫೈನಲ್ನಿಂದ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ 5ನೇ ಸುತ್ತಿನ ನಂತರ ಹೊರಬಿದ್ದರು. ಅವರು, 84.03 ಮೀಟರ್ ದೂರ ಎಸೆದು ಒಟ್ಟಾರೆ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆದರು.

ಅವರು, ತಮ್ಮ ನಾಲ್ಕನೇ ಎಸೆತದ ಬಳಿಕ 8ನೇ ಸ್ಥಾನ ಪಡೆದಿದ್ದರು. ತಮ್ಮ ಕೋಟಾದ ಐದನೇ ಎಸೆತವನ್ನು ಫೌಲ್ ಮಾಡುವ ಮೂಲಕ ಚಾಂಪಿಯನ್ಶಿಪ್ ಫೈನಲ್ನಿಂದ ಹೊರಬಿದ್ದರು.

ಆರು ಮತ್ತು ಅಂತಿಮ ಸುತ್ತಿನಲ್ಲಿ ಅಗ್ರ 6 ಕ್ರೀಡಾಪಟುಗಳು ಮಾತ್ರ ಸ್ಪರ್ಧಿಸಲಿದ್ದಾರೆ. ಇನ್ನೂ ಒಲಿಂಪಿಕ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ 4ನೇ ಸುತ್ತಿನಲ್ಲೇ ನಿರ್ಗಮಿಸಿದರು.

ಇನ್ನೋರ್ವ ಭಾರತೀಯ ಜಾವೆಲಿನ್ ಎಸೆತಗಾರ ಸಚಿನ್ ಯಾದವ್ ಇನ್ನೂ ಸ್ಪರ್ಧೆಯಲ್ಲಿದ್ದಾರೆ. ಅವರು ಒಟ್ಟಾರೆಯಾಗಿ ನಾಲ್ಕನೇ ಸ್ಥಾನದಲ್ಲಿದ್ದು, 86.27 ಮೀಟರ್ ಎಸೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.