ಭಾನುವಾರ, ಸೆಪ್ಟೆಂಬರ್ 20, 2020
21 °C

ನಿಸಾನ್‌, ಬೆಂಜ್‌ ಬೆಲೆ ಏರಿಕೆ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತಯಾರಿಕಾ ವೆಚ್ಚದಲ್ಲಿ ಏರಿಕೆ ಆಗುತ್ತಿರುವುದರಿಂದ ಹೊಸ ವರ್ಷದಿಂದ ಬೆಲೆ ಏರಿಕೆ ಮಾಡಲು ಕಾರ್‌ ಕಂಪನಿಗಳು ನಿರ್ಧರಿಸಿವೆ.

ನಿಸಾನ್‌ ಮೋಟರ್‌ ಇಂಡಿಯಾ ಕಂಪನಿಯು ಶೇ 5ರವರೆಗೂ ಬೆಲೆಯಲ್ಲಿ ಏರಿಕೆ ಮಾಡಲಿದೆ. ನಿಸಾನ್‌ ಮತ್ತು ಡಾಟ್ಸನ್‌ನ ಎಲ್ಲಾ ಮಾದರಿಗಳಿಗೂ ಇದು ಅನ್ವಯವಾಗಲಿದೆ.

ಬೆಂಜ್: ಐಷಾರಾಮಿ ಕಾರ್ ತಯಾರಿಸುವ ಮರ್ಸಿಡಿಸ್‌ ಬೆಂಜ್‌ ಕಂಪನಿ ಸಹ ಜನವರಿಯಿಂದ ಶೇ 3ರವರೆಗೆ ಬೆಲೆ ಏರಿಕೆಗೆ ಮುಂದಾಗಿದೆ.

‘ಸುಸ್ಥಿರ ವಹಿವಾಟು ನಡೆಸಲು ಬೆಲೆಯಲ್ಲಿ ಅಲ್ಪ ಮಟ್ಟಿನ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ’ ಎಂದು ಮರ್ಸಿಡಿಸ್‌ ಬೆಂಜ್‌ ಇಂಡಿಯಾದ ಸಿಇಒ ಮಾರ್ಟಿನ್‌ ಶ್ವೆಂಕ್‌ ತಿಳಿಸಿದ್ದಾರೆ.

ಮಾರುತಿ ಸುಜುಕಿ, ಟಾಟಾ ಮೋಟರ್ಸ್‌, ಹುಂಡೈ, ಹೀರೊ ಮೋಟೊಕಾರ್ಪ್‌ ಕಂಪನಿಗಳು ಸಹ ಜನವರಿಯಿಂದ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು