ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತ್– ರಾಧಿಕಾ ವಿವಾಹ: ಕಾಶಿ ವಿಶ್ವನಾಥನಿಗೆ ಲಗ್ನಪತ್ರಿಕೆ ನೀಡಿದ ನೀತಾ ಅಂಬಾನಿ

Published 25 ಜೂನ್ 2024, 20:28 IST
Last Updated 25 ಜೂನ್ 2024, 20:28 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ, ತಮ್ಮ ಕಿರಿಯ ಪುತ್ರನ ವಿವಾಹದ ಮೊದಲ ಆಹ್ವಾನ ಪತ್ರಿಕೆಯನ್ನು ಅಲ್ಲಿನ ದೇವರ ಹೆಸರಿಗೆ ನೀಡಿದರು.

ಜುಲೈ 12ರಂದು ಮುಕೇಶ್- ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ವಿವಾಹವು ಉದ್ಯಮಿ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜತೆಗೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿನ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.

‘ಹತ್ತು ವರ್ಷಗಳ ನಂತರ ಕಾಶಿಗೆ ಬಂದಿದ್ದು, ಅನಂತ್- ರಾಧಿಕಾ ಮದುವೆ ಆಹ್ವಾನ ಪತ್ರಿಕೆ ದೇವರಿಗೆ ಸಮರ್ಪಿಸಿದ್ದೇನೆ. ಇದರ ಜತೆಗೆ ಗಂಗಾ ಆರತಿಯಲ್ಲೂ ಪಾಲ್ಗೊಂಡಿದ್ದೇನೆ. ಈ ಕ್ಷೇತ್ರದಲ್ಲಿ ಬಹಳ ಶಕ್ತಿ ಇದೆ. ಇಲ್ಲಿ ಆಗಿರುವಂಥ ಅಭಿವೃದ್ಧಿ ಕಾರ್ಯಗಳನ್ನು ನೋಡುವುದಕ್ಕೆ ಬಹಳ ಸಂತೋಷವಾಗುತ್ತದೆ’ ಎಂದು ಹೇಳಿದರು.

ಈ ವೇಳೆ ಸ್ಥಳೀಯ ಚಾಟ್ ಮಳಿಗೆಗೆ ಭೇಟಿ ನೀಡಿ ಖಾದ್ಯಗಳನ್ನು ಸವಿದ ಅವರು, ಸ್ಥಳೀಯರ ಜತೆಗೆ ಮಾತುಕತೆ ನಡೆಸಿದರು.

ಅನಂತ್- ರಾಧಿಕಾ ವಿವಾಹ ಸಮಾರಂಭವು ಜುಲೈ 12, 13 ಹಾಗೂ 14 ನಡೆಯಲಿದೆ. ಸಾಂಪ್ರದಾಯಿಕ ಮತ್ತು ವಿವಾಹದ ನಂತರದ ಕೆಲವು ಕಾರ್ಯಕ್ರಮಗಳಿಗೆ ಜಗತ್ತಿನ ವಿವಿಧೆಡೆಗಳಿಂದ ಅತಿಥಿಗಳು, ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ವೈದಿಕ ಪದ್ಧತಿಯಲ್ಲಿ ವಿವಾಹ ನಡೆಯಲಿದೆ.

ಕಾಶಿಗೆ ಭೇಟಿ ನೀಡಿದ್ದ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಸ್ಥಳೀಯ ಚಾಟ್ ಮಳಿಗೆಗೆ ಭೇಟಿ ನೀಡಿ ಖಾದ್ಯಗಳನ್ನು ಸವಿದರು 
ಕಾಶಿಗೆ ಭೇಟಿ ನೀಡಿದ್ದ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಸ್ಥಳೀಯ ಚಾಟ್ ಮಳಿಗೆಗೆ ಭೇಟಿ ನೀಡಿ ಖಾದ್ಯಗಳನ್ನು ಸವಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT