ನವದೆಹಲಿ: ಚೀನಾ, ಕೆನಡಾ, ಮೆಕ್ಸಿಕೊ ಸೇರಿದಂತೆ ಬೇರೆ ಬೇರೆ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಹೆಚ್ಚಿನ ಸುಂಕ ವಿಧಿಸಿದ ನಂತರದಲ್ಲಿ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳು ಹೆಚ್ಚು ಸ್ಪರ್ಧಾತ್ಮಕ ಆಗಲಿವೆ ಎಂದು ನೀತಿ ಆಯೋಗವು ಸೋಮವಾರ ಹೇಳಿದೆ.

ಅಮೆರಿಕದ ಮಾರುಕಟ್ಟೆಯಲ್ಲಿ ಭಾರತಕ್ಕೆ ಗಮನಾರ್ಹವಾದ ಅವಕಾಶಗಳು ಲಭ್ಯವಾಗಲಿವೆ ಎಂದು ನೀತಿ ಆಯೋಗದ ತ್ರೈಮಾಸಿಕ ವರದಿಯೊಂದು ಹೇಳಿದೆ. ‘ಕೆಲವು ಉತ್ಪನ್ನಗಳನ್ನು ಅಮೆರಿಕ್ಕೆ ರಫ್ತು ಮಾಡುವಲ್ಲಿ ಚೀನಾ, ಕೆನಡಾ ಮತ್ತು ಮೆಕ್ಸಿಕೊ ಮುಂಚೂಣಿ ಸ್ಥಾನ ಹೊಂದಿವೆ. ಈ ದೇಶಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದರಿಂದಾಗಿ ಭಾರತವು ಹೆಚ್ಚು ಸ್ಪರ್ಧಾತ್ಮಕವಾಗಲಿದೆ’ ಎಂದು ವರದಿಯು ವಿವರಿಸಿದೆ.

ಖನಿಜಗಳು, ಇಂಧನ, ವಸ್ತ್ರ, ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್, ಪೀಠೋಪಕರಣ, ಮೀನು ಮತ್ತು ಸಿಗಡಿಯಂತಹ ಸಮುದ್ರ ಆಹಾರೋತ್ಪನ್ನಗಳ ವಿಭಾಗದಲ್ಲಿ ಭಾರತವು ಹೆಚ್ಚಿನ ಪ್ರಯೋಜನ ಪಡೆಯಲಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.