ಮಂಗಳವಾರ, ನವೆಂಬರ್ 19, 2019
27 °C

ಜನವರಿಯಿಂದ ಶುಲ್ಕರಹಿತ ‘ನೆಫ್ಟ್‌’

Published:
Updated:

ಮುಂಬೈ: ಬ್ಯಾಂಕ್‌ನ ಉಳಿತಾಯ ಖಾತೆಯಿಂದ ಇತರರ ಖಾತೆಗೆ ಹಣ ವರ್ಗಾಯಿಸುವ ರಾಷ್ಟ್ರೀಯ ಎಲೆಕ್ಟ್ರಾನಿಕ್‌ ನಿಧಿ ವರ್ಗಾವಣೆ (ನೆಫ್ಟ್‌) ಸೇವೆಯು ಹೊಸ ವರ್ಷದಿಂದ (2020ರ ಜನವರಿ) ಉಚಿತವಾಗಿರಲಿದೆ.

ನಗದುರಹಿತ (ಡಿಜಿಟಲ್‌) ವಹಿವಾಟಿಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ಕ್ರಮಕ್ಕೆ ಮುಂದಾಗಿದೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಗೆ ಮೂರು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟಗೊಂಡಿದೆ.

ಪಾರ್ಕಿಂಗ್‌ ಶುಲ್ಕ ಮತ್ತು ಪೆಟ್ರೋಲ್‌ ಬಂಕ್‌ಗಳಲ್ಲಿ ಹಣ ಪಾವತಿಗೆ ಫಾಸ್ಟ್‌ಟ್ಯಾಗ್‌ ಬಳಸುವ ನಿಟ್ಟಿನಲ್ಲಿಯೂ ಕೇಂದ್ರೀಯ ಬ್ಯಾಂಕ್‌ ಆಲೋಚಿಸುತ್ತಿದೆ.

ಕಳೆದ ಒಂದು ವರ್ಷದಲ್ಲಿ ‘ನೆಫ್ಟ್‌’ ಮತ್ತು ‘ಯುಪಿಐ’ ಕ್ರಮವಾಗಿ 252 ಕೋಟಿ ಮತ್ತು 874 ಕೋಟಿಗಳಷ್ಟು ವಹಿವಾಟು ನಡೆಸಿವೆ. ಈ ಎರಡೂ ವಹಿವಾಟುಗಳ ವಾರ್ಷಿಕ ಪ್ರಗತಿಯು ಕ್ರಮವಾಗಿ ಶೇ 20 ಮತ್ತು ಶೇ 263ರಷ್ಟಿದೆ.

ಪ್ರತಿಕ್ರಿಯಿಸಿ (+)