ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2 ಸಾವಿರದ ನೋಟು ಮುದ್ರಣ ಸ್ಥಗಿತ ಇಲ್ಲ: ಕೇಂದ್ರ ಸರ್ಕಾರ

Last Updated 19 ಸೆಪ್ಟೆಂಬರ್ 2020, 12:58 IST
ಅಕ್ಷರ ಗಾತ್ರ

ನವದೆಹಲಿ: ‘₹ 2 ಸಾವಿರದ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸುವ ನಿರ್ಧಾರ ಸರ್ಕಾರಕ್ಕೆ ಇಲ್ಲ’ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಲೋಕಸಭೆಗೆ ಲಿಖಿತ ರೂಪದ ಉತ್ತರ ನೀಡಿದ ಅವರು, ‘ಲಾಕ್‌ಡೌನ್‌ ಕಾರಣಕ್ಕಾಗಿ ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆರ್‌ಬಿಐಗೆ ಸೂಚನೆ ನೀಡಲಾಗಿತ್ತು’ ಎಂದಿದ್ದಾರೆ.

‘2019–20 ಮತ್ತು 2020–21ರ ಅವಧಿಯಲ್ಲಿ ₹ 2 ಸಾವಿರದ ಒಂದೇ ಒಂದು ನೋಟು ಸಹ ಮುದ್ರಣ ಆಗಿಲ್ಲ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರ್ಗಸೂಚಿಯ ಅನ್ವಯ ನೋಟುಗಳ ಮುದ್ರಣ ಕಾರ್ಯವು ಹಂತ ಹಂತವಾಗಿ ಆರಂಭವಾಗಿದೆ. ‘2020ರ ಮಾರ್ಚ್‌ 31ರ ಅಂತ್ಯದ ವೇಳೆಗೆ ₹ 2 ಸಾವಿರದ ಮುಖಬೆಲೆಯ 27,398 ನೋಟುಗಳು ಚಲಾವಣೆಯಲ್ಲಿ ಇವೆ. 2019ರ ಮಾರ್ಚ್‌ 31ರ ಅಂತ್ಯದ ವೇಳೆಗೆ 32,910 ನೋಟುಗಳು ಚಲಾವಣೆಯಲ್ಲಿ ಇದ್ದವು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT