ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಇಲ್ಲ

ಸಂಸತ್‌ನಲ್ಲಿ ಆರ್ಥಿಕ ವಿಚಾರ
Last Updated 28 ಜೂನ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಹಾಲಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ.

ಹಾಲು ಬಹು ಬೇಗನೆ ಹಾಳಾಗುವುದರಿಂದ ‘ಎಂಎಸ್‌ಪಿ’ ನಿಗದಿಪಡಿಸುವುದು ಸಾಧ್ಯವಾಗಲಾರದು. ಹಾಲಿನ ಸಹಕಾರಿ ಸಂಘಗಳು ಮತ್ತು ಖಾಸಗಿ ಹೈನೋದ್ಯಮಗಳು ಉತ್ಪಾದನಾ ವೆಚ್ಚ ಆಧರಿಸಿ ಹಾಲಿನ ಖರೀದಿ ಬೆಲೆ ನಿಗದಿಪಡಿಸುತ್ತವೆ. ಹಾಲಿನ ಬೆಲೆ ನಿಯಂತ್ರಿಸುವ ವ್ಯವಸ್ಥೆ ಜಾರಿಯಲ್ಲಿ ಇಲ್ಲ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನೋದ್ಯಮ ರಾಜ್ಯ ಸಚಿವ ಸಂಜೀವ್‌ ಕುಮಾರ್‌ ಬಲ್ಯಾನ್‌ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಹಾಲಿನ ಉತ್ಪಾದನೆ ನಿರಂತರವಾಗಿ ಹೆಚ್ಚುತ್ತಿದ್ದು, 2017–18ರಲ್ಲಿ 17.63 ಕೋಟಿ ಟನ್‌ಗಳಷ್ಟು ಉತ್ಪಾದನೆಯಾಗಿದೆ.

ಒಂಟೆ ಹಾಲು: ಒಂಟೆ ಹಾಲಿನ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರಗಳಿಂದ ಅಥವಾ ಸಹಕಾರಿ ಸಂಘಗಳಿಂದ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಅವರು ಪ್ರತ್ಯೇಕ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಚೀನಾದ ಎಫ್‌ಡಿಐ: 2014 ರಿಂದ ಈ ವರ್ಷದ ಮಾರ್ಚ್‌ವರೆಗೆ ಚೀನಾದಿಂದ ₹ 12,474 ಕೋಟಿಗಳಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.

‘ವಾಹನ ತಯಾರಿಕೆ, ವಿದ್ಯುತ್‌ ಉಪಕರಣ ಮತ್ತು ಸೇವಾ ವಲಯಗಳು ಗರಿಷ್ಠ ಪ್ರಮಾಣದ ಹೂಡಿಕೆ ಆಕರ್ಷಿಸಿವೆ. ಚೀನಾದ ಜತೆಗಿನ ಆಮದು ಮತ್ತು ರಫ್ತು ವ್ಯತ್ಯಾಸವಾಗಿರುವ ವ್ಯಾಪಾರ ಕೊರತೆಯು ₹ 4.41 ಲಕ್ಷ ಕೋಟಿಗಳಿಂದ ₹ 3.74 ಲಕ್ಷ ಕೋಟಿಗೆ ಇಳಿದಿದೆ. ಅಮೆರಿಕದಿಂದ ₹95,340 ಕೋಟಿಗಳಷ್ಟು ಎಫ್‌ಡಿಐ ಹರಿದು ಬಂದಿದೆ’ ಎಂದು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT