ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ: ಸೆಬಿಗೆ ಕರಡು ಪತ್ರ ಸಲ್ಲಿಸಿದ ಎನ್‌ಎಸ್‌ಡಿಎಲ್‌

Published 8 ಜುಲೈ 2023, 15:54 IST
Last Updated 8 ಜುಲೈ 2023, 15:54 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ (ಎನ್‌ಎಸ್‌ಡಿಎಲ್‌) ಐಪಿಒಗಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿದೆ.

ಈ ಐಪಿಒ ಸಂಪೂರ್ಣವಾಗಿ ಆಫರ್ ಫಾರ್ ಸೇಲ್ (ಒಎಫ್‌ಎಸ್‌) ಆಗಿರಲಿದೆ. ಹಾಲಿ ಷೇರುದಾರರ 5.72 ಕೋಟಿಗೂ ಅಧಿಕ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಾಗುವುದು ಎಂದು ಕರಡು ದಾಖಲೆ ಪತ್ರದಲ್ಲಿ  ತಿಳಿಸಿದೆ.

ಈಕ್ವಿಟಿ ಷೇರುಗಳಲ್ಲಿ ಒಂದಷ್ಟು ಭಾಗವನ್ನು ಕಂಪನಿಯ ಅರ್ಹ ಉದ್ಯೋಗಿಗಳಿಗೆ ಮೀಸಲು ಇಡಲಾಗುವುದು. ಐಪಿಒ ದರದಲ್ಲಿ ರಿಯಾಯಿತಿಯನ್ನೂ ನೀಡುವ ಸಾಧ್ಯತೆ ಇದೆ.

2022–23ನೇ ಹಣಕಾಸು ವರ್ಷದಲ್ಲಿ ಎನ್‌ಎಸ್‌ಡಿಎಲ್ ವರಮಾನ ₹1,099.81 ಕೋಟಿ ಇದ್ದು, ನಿವ್ವಳ ಲಾಭ ₹234.81 ಕೋಟಿಯಷ್ಟು ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT