ಮಂಗಳವಾರ, ಜೂನ್ 15, 2021
25 °C

ತಗ್ಗಿದ ಸ್ವತಂತ್ರ ನಿರ್ದೇಶಕರ ಸಂಖ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2019 ಹಾಗೂ 2018ನೆಯ ಇಸವಿಗಳಿಗೆ ಹೋಲಿಸಿದರೆ 2020ರಲ್ಲಿ ಸ್ವತಂತ್ರ ನಿರ್ದೇಶಕರ ಸಂಖ್ಯೆ ಕಡಿಮೆ ಆಗಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ನಿರ್ದೇಶಕರನ್ನು ನೇಮಕ ಮಾಡದಿರುವುದು ಸಂಖ್ಯೆ ಕಡಿಮೆ ಆಗಿರುವುದಕ್ಕೆ ಮುಖ್ಯ ಕಾರಣ ಎಂದು ವರದಿಯೊಂದು ಹೇಳಿದೆ.

2018ರಲ್ಲಿ ಇದ್ದ ಸ್ವತಂತ್ರ ನಿರ್ದೇಶಕರ ಸಂಖ್ಯೆ 2,494 ಆಗಿತ್ತು. 2019ರಲ್ಲಿ ಇವರ ಸಂಖ್ಯೆಯು 2,396ಕ್ಕೆ ಇಳಿಕೆಯಾಯಿತು. 2020ರಲ್ಲಿ 2,249ಕ್ಕೆ ತಗ್ಗಿತು ಎಂದು ಸಾಂಸ್ಥಿಕ ಹೂಡಿಕೆದಾರರ ಸಲಹಾ ಸೇವಾ ಸಂಸ್ಥೆ (ಐಐಎಎಸ್‌) ಸಿದ್ಧಪಡಿಸಿರುವ ವರದಿ ಹೇಳಿದೆ. ನಿಫ್ಟಿ–500 ಕಂಪನಿಗಳ ಆಡಳಿತ ಮಂಡಳಿಗಳನ್ನು ಅಧ್ಯಯನ ನಡೆಸಿ ಅದು ಈ ವರದಿ ಸಿದ್ಧಪಡಿಸಿದೆ.

2020ರ ಡಿಸೆಂಬರ್‌ವರೆಗಿನ ಮಾಹಿತಿಯ ಪ್ರಕಾರ, ನಿಫ್ಟಿ–500 ಕಂಪನಿಗಳಲ್ಲಿ ಒಟ್ಟು 141 ಸ್ವತಂತ್ರ ನಿರ್ದೇಶಕರ ನೇಮಕಾತಿಯು ಬಾಕಿ ಇತ್ತು. ಸ್ವತಂತ್ರ ನಿರ್ದೇಶಕರನ್ನು ನೇಮಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳು ಹೇಳುತ್ತವೆ. ಆದರೆ, 2020ರ ಡಿಸೆಂಬರ್‌ 31ರ ವೇಳೆಗೆ ಶೇಕಡ 14ರಷ್ಟು ಕಂಪನಿಗಳು (70 ಕಂಪನಿಗಳು) ಆಡಳಿತ ಮಂಡಳಿಯಲ್ಲಿನ ನೇಮಕಾತಿ ವಿಚಾರದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸಿರಲಿಲ್ಲ. ಈ 70 ಕಂಪನಿಗಳ ಪೈಕಿ 55 ಕಂಪನಿಗಳು ಸರ್ಕಾರಿ ಮಾಲೀಕತ್ವದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು