ಬಿಡದಿಯಲ್ಲಿ ಎನ್‍ವೆಂಟ್ ಹೊಸ ತಯಾರಿಕಾ ಘಟಕ

7

ಬಿಡದಿಯಲ್ಲಿ ಎನ್‍ವೆಂಟ್ ಹೊಸ ತಯಾರಿಕಾ ಘಟಕ

Published:
Updated:

ಬೆಂಗಳೂರು: ವಿದ್ಯುತ್ ಉಪಕರಣಗಳು ಮತ್ತು ರಕ್ಷಣಾ ಸೇವೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಎನ್‍ವೆಂಟ್ ಎಲೆಕ್ಟ್ರಿಕ್ ಪಿಎಲ್‍ಸಿ, ಬಿಡದಿಯಲ್ಲಿ ತನ್ನ ಹೊಸ ಸಾಧನ ಮತ್ತು ವಿದ್ಯುತ್ ರಕ್ಷಣಾ ಸೌಲಭ್ಯಗಳ ಘಟಕ ಆರಂಭಿಸಿದೆ.

ಬೆಂಗಳೂರಿನಲ್ಲಿ ಪ್ರಸ್ತುತ ಇರುವ ಘಟಕದೊಂದಿಗೆ ಎನ್‍ವೆಂಟ್‍ನ ಹೊಸ ಘಟಕವು ಎರಡು ಪ್ರಧಾನ ಸಂಸ್ಥೆಗಳಾದ ಹಾಫ್‍ಮನ್ ಮತ್ತು ಶ್ರಾಫ್ ಬ್ರ್ಯಾಂಡ್‌ಗಳನ್ನು ತಯಾರಿಸಲು ಆರಂಭಿಸಲಾಗಿದೆ. ನೂತನ ಘಟಕದಲ್ಲಿ ನೂರು ಮಂದಿ ಉದ್ಯೋಗಿಗಳಿದ್ದಾರೆ. ದೇಶದಲ್ಲಿ ಕಾರ್ಯಾಚರಣೆ ಹಾಗೂ ಮಾರಾಟ ಎರಡನ್ನೂ ಸರಿದೂಗಿಸಲು  ಉದ್ಯೋಗಾವಕಾಶಗಳನ್ನು ಒದಗಿಸುವ ಯೋಜನೆ ಸಂಸ್ಥೆ ಹೊಂದಿದೆ.

‘ಭಾರತವು ನಮ್ಮ ಅತಿಮುಖ್ಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಎನ್‍ವೆಂಟ್ ಪ್ರಬಲವಾದ ಉತ್ಪನ್ನ ಕೊಡುಗೆಗಳನ್ನು ಹೊಂದಿರುವಂತಹ ರೈಲ್ವೆ ಹಾಗೂ ಡೇಟಾ ಕೇಂದ್ರಗಳಂತಹ ಕ್ಷೇತ್ರಗಳಲ್ಲೂ ಬೆಳೆಯುತ್ತಿದೆ. 2008ರಿಂದಲೂ ನಾವು ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ವಹಿವಾಟು ವಿಸ್ತರಣೆಗೆ ಇದು ಸರಿಯಾದ ಸಮಯವಾಗಿದೆ’ಎಂದು ಅಧ್ಯಕ್ಷ ಜೋ ರುಜಿಂಕಿ ತಿಳಿಸಿದರು.

ವಾಲ್‌ ಮೌಂಟ್‌, ಸ್ಟೇನ್‌ಲೆಸ್‌ ಸ್ಟೀಲ್‌, ಎಲೆಕೆಟ್ರಾನಿಕ್ ಕ್ಯಾಬಿನೆಟ್ಸ್‌, ಎಲೆಕ್ಟ್ರೋಮೆಕ್ಯಾನಿಕಲ್‌ ಕಾಂಪೊನೆಂಟ್ಸ್‌ ಇತ್ಯಾದಿ ಈ ಘಟಕಗಳಲ್ಲಿ ತಯಾರಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !