ಗುರುವಾರ , ಏಪ್ರಿಲ್ 9, 2020
19 °C
ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಅಂದಾಜು

ಕೋವಿಡ್‌–19 ಪರಿಣಾಮ: ಕುಸಿಯಲಿದೆ ತೈಲ ಬೇಡಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಕೋವಿಡ್‌–19 ವೈರಸ್‌ನಿಂದಾಗಿ ಜಾಗತಿಕ ತೈಲ ಬೇಡಿಕೆಯು 2020ರಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಅಭಿಪ್ರಾಯಪಟ್ಟಿದೆ.

ಸೌದಿ ಅರೇಬಿಯಾವು ದರದಲ್ಲಿ ಇಳಿಕೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತೈಲ ದರ ಸಮರಕ್ಕೆ ಚಾಲನೆ ನೀಡಿದೆ. ಇದರಿಂದಾಗಿ ತೈಲ ದರದಲ್ಲಿ ಭಾರಿ ಇಳಿಕೆ ಕಾಣುತ್ತಿದೆ. ಹೀಗಾಗಿ ಬೇಡಿಕೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.

2020ರಲ್ಲಿ ಒಂದು ದಿನದ ತೈಲ ಬೇಡಿಕೆಯು 90 ಸಾವಿರ ಬ್ಯಾರಲ್‌ಗಳಷ್ಟು ಕಡಿಮೆ ಇರಲಿದ್ದು, ಒಟ್ಟಾರೆ ಬೇಡಿಕೆಯು 9.99 ಕೋಟಿ ಬ್ಯಾರಲ್‌ಗಳಷ್ಟಿರಲಿದೆ ಎಂದು ತಿಳಿಸಿದೆ. 2009ರ ನಂತರ ಬೇಡಿಕೆಯು ಈ ಪ್ರಮಾಣದಲ್ಲಿ ಕುಸಿತ ಕಂಡಿದೆ. 

‘ಕೋವಿಡ್‌ನಿಂದಾಗಿ ಸರಕು ಮತ್ತು ಸೇವೆಗಳ ಸಾಗಣೆಯಷ್ಟೇ ಅಲ್ಲದೆ, ಜನರು ಸಹ ಬೇರೆ ದೇಶಗಳಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ತೈಲ ಮಾರುಕಟ್ಟೆಯ ಮೇಲೆ ಹೆಚ್ಚಿನ ಹಾನಿ ಆಗುತ್ತಿದೆ’ ಎಂದು ಐಇಎ ಕಾರ್ಯನಿರ್ವಾಹಕ ನಿರ್ದೇಶಕ ಫತಿಹ್‌ ಬಿರೋಲ್‌ ಹೇಳಿದ್ದಾರೆ. 

ತೈಲ ದರ ಕುಸಿತ
ಸೌದಿ ಅರೇಬಿಯಾ ದೇಶವು ದರ ಸಮರಕ್ಕೆ ಮುಂದಾಗಿರುವುದರಿಂದ ಸೋಮವಾರ ಕಚ್ಚಾ ತೈಲ ದರ ಶೇ 30ರಷ್ಟು ಕುಸಿತ ಕಂಡಿತು.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಮಾರ್ಚ್‌ನಲ್ಲಿ ಪೂರೈಕೆ ಮಾಡುವ ಕಚ್ಚಾ ತೈಲ ದರ ಶೇ 30ರಷ್ಟು ಇಳಿಕೆಯಾಗಿ ಬ್ಯಾರಲ್‌ಗೆ ₹ 2,216ಕ್ಕೆ ತಲುಪಿದೆ.

ಏಪ್ರಿಲ್‌ನಲ್ಲಿ ಪೂರೈಕೆ ಮಾಡುವ ತೈಲ ದರ ಬ್ಯಾರಲ್‌ಗೆ ಶೇ 28.03ರಷ್ಟು ಕಡಿಮೆಯಾಗಿದ್ದು, ₹ 2,308ಕ್ಕೆ ತಲುಪಿದೆ.

ಉತ್ಪಾದನೆ ಕಡಿತ ಮಾಡುವ ಕುರಿತಾದ ಒಪೆಕ್‌–ರಷ್ಯಾ ಸಂಧಾನ ಮಾತುಕತೆ ವಿಫಲವಾಗಿದೆ. ಇದರಿಂದಾಗಿ, ಕೋವಿಡ್‌ ವೈರಸ್‌ ವಿರುದ್ಧದ ಸಮರವು ತೈಲ ರಫ್ತು  ಸಮರವಾಗಿ ಬದಲಾಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಅಂಕಿ– ಅಂಶಗಳು

90 ಸಾವಿರ ಬ್ಯಾರಲ್‌: 2020ರಲ್ಲಿ ದಿನದ ಬೇಡಿಕೆಯಲ್ಲಿ ಆಗಲಿರುವ ಇಳಿಕೆ

10 ಲಕ್ಷ ಬ್ಯಾರೆಲ್‌: ಒಟ್ಟಾರೆ ಬೇಡಿಕೆಯಲ್ಲಿ ಆಗಲಿರುವ ಇಳಿಕೆ

21 ಲಕ್ಷ ಬ್ಯಾರಲ್‌:2021ರಲ್ಲಿ ದಿನದ ಬೇಡಿಕೆಯಲ್ಲಿ ಆಗಲಿರುವ ಏರಿಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು