ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪೆಕ್‌-ರಷ್ಯಾ ಒಪ್ಪಂದ | ಪ್ರತಿ ದಿನ 97 ಲಕ್ಷ ಬ್ಯಾರಲ್‌ ತೈಲ ಉತ್ಪಾದನೆ ಕಡಿತ

Last Updated 14 ಏಪ್ರಿಲ್ 2020, 2:20 IST
ಅಕ್ಷರ ಗಾತ್ರ

ವಿಯೆನ್ನಾ: ಕಚ್ಚಾ ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಪ್ರತಿ ದಿನ 97 ಲಕ್ಷ ಕೋಟಿ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತಗೊಳಿಸುವ ಐತಿಹಾಸಿಕ ಒಪ್ಪಂದಕ್ಕೆ ಬಂದಿವೆ.

ಸೌದಿ ಅರೇಬಿಯಾ ನೇತೃತ್ವದಲ್ಲಿಮ ಕಚ್ಚಾ ತೈಲ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್‌) ಮತ್ತು ರಷ್ಯಾ ನೇತೃತ್ವದಲ್ಲಿನ ಮಿತ್ರ ದೇಶಗಳು ವಿಡಿಯೊ ಕಾನ್‌ಫೆರನ್ಸ್‌ ಮೂಲಕ ಒಪ್ಪಂದಕ್ಕೆ ಬಂದಿವೆ. ಭಾನುವಾರದ ಸಭೆಯಲ್ಲಿ ತೈಲ ಉತ್ಪಾದಿಸುವ ಪ್ರಮುಖ ದೇಶಗಳು ರಾಜಿ ಸೂತ್ರಕ್ಕೆ ಸಮ್ಮತಿಸಿವೆ. ಮೇ ತಿಂಗಳಿನಿಂದ ಪ್ರತಿ ದಿನ 97 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡಲು ಒಪ್ಪಿಕೊಂಡಿವೆ. ಶುಕ್ರವಾರದ ಸಭೆಯಲ್ಲಿ ದಿನವೊಂದಕ್ಕೆ 1 ಕೋಟಿ ಬ್ಯಾರಲ್‌ಗಳಷ್ಟು ಉತ್ಪಾದನೆ ಕಡಿತಗೊಳಿಸುವ ನಿರ್ಧಾರಕ್ಕೆ ಬರ ಲಾಗಿತ್ತು. ಇದಕ್ಕೆ ಮೆಕ್ಸಿಕೊ ತನ್ನ ಸಮ್ಮತಿ ನೀಡಿರಲಿಲ್ಲ. ಈಗ ಆ ಅಡಚಣೆಯೂ ದೂರವಾಗಿದೆ. ಸಭೆಯ ಅಧ್ಯಕ್ಷತೆವಹಿಸಿದ್ದ ಸೌದಿ ಅರೇಬಿಯಾದ ಇಂಧನ ಸಚಿವ ಅಬ್ದುಲ್‌ಜೀಜ್‌ ಬಿನ್‌ ಸಲ್ಮಾನ್‌ ಅವರು ಸಂಧಾನ ಮಾತುಕತೆ ಯಶಸ್ವಿಯಾಗಿರುವುದನ್ನು ಖಚಿತಪಡಿಸಿದ್ದಾರೆ.

‘ಎಲ್ಲರ ಪಾಲಿಗೂ ಇದೊಂದು ದೊಡ್ಡ ಒಪ್ಪಂದವಾಗಿದೆ. ಅಮೆರಿ ಕದ ಇಂಧನ ವಲಯದಲ್ಲಿನ ಲಕ್ಷಾಂತರ ಉದ್ಯೋಗ ಅವಕಾಶಗಳನ್ನು ಉಳಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್‌ ಮತ್ತು ಸೌದಿ ದೊರೆ ಮೊಹ ಮ್ಮದ್‌ ಬಿನ್‌ ಸಲ್ಮಾನ್‌ ಅವರನ್ನು ಟ್ರಂಪ್‌ ಅಭಿನಂದಿಸಿದ್ದಾರೆ.

ತಾತ್ಕಾಲಿಕ ನೆಮ್ಮದಿ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿಶ್ವದಾದ್ಯಂತ ಪ್ರತಿ ದಿನ ಕ್ರಮವಾಗಿ 2.7 ಕೋಟಿ ಮತ್ತು 2 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಬಳಕೆ ಕಡಿಮೆಯಾಗುವ ಅಂದಾಜಿದೆ. ಇಂತಹ ಸಂದರ್ಭದಲ್ಲಿ ಉತ್ಪಾದನೆ ಕಡಿತಗೊಳಿಸಲು ಒಮ್ಮತಾಭಿಪ್ರಾಯ ಮೂಡಿರುವುದು ತಾತ್ಕಾಲಿಕವಾಗಿ ನೆಮ್ಮದಿ ನೀಡುವ ಸಂಗತಿಯಾಗಿದೆ ಎಂದು ಕೆನಡಾ ಪ್ರತಿಕ್ರಿಯಿಸಿದೆ.

‘ಈ ತೈಲ ಕಡಿತದ ನಿರ್ಧಾರವು ಐತಿಹಾಸಿಕವಾಗಿದೆ’ ಎಂದು ‘ಒಪೆಕ್‌’ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಬರ್ಕಿಂಡೊ ಅವರು ಪ್ರತಿಕ್ರಿಯಿಸಿದ್ದಾರೆ.

ಮೇ ಮತ್ತು ಜೂನ್‌ನಲ್ಲಿ ಉತ್ಪಾದನೆ ಕಡಿತದ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇರಲಿದೆ. 2022ರ ಏಪ್ರಿಲ್‌ವರೆಗೆ ಉತ್ಪಾದನೆ ಪ್ರಮಾಣವು ಹಂತ ಹಂತವಾಗಿ ಕಡಿಮೆಯಾಗಲಿದೆ.

ಸಂಗ್ರಹಾಗಾರಗಳಲ್ಲಿ ಭರ್ತಿಯಾ ಗುತ್ತಿರುವ ತೈಲದ ಪ್ರಮಾಣಕ್ಕೆ ಹೋಲಿಸಿ ದರೆ ಉತ್ಪಾದನೆ ಕಡಿತ ಪ್ರಮಾಣವು ತುಂಬ ಕಡಿಮೆ ಇದೆ. ವರ್ಷಾಂತ್ಯದಲ್ಲಿ ತೈಲ ಮಾರುಕಟ್ಟೆ ಚೇತರಿಸಿಕೊಳ್ಳಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT