ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈಗೆ ಓಲಾ ಇ–ಸ್ಕೂಟರ್

Last Updated 22 ಏಪ್ರಿಲ್ 2021, 13:01 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮಾರುಕಟ್ಟೆಗೆ ಜುಲೈನಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌ ಬಿಡುಗಡೆ ಮಾಡುವುದಾಗಿ ಓಲಾ ಎಲೆಕ್ಟ್ರಿಕ್‌ ಕಂಪನಿ ಗುರುವಾರ ತಿಳಿಸಿದೆ. 400 ನಗರಗಳಲ್ಲಿ 1 ಲಕ್ಷ ಹೈಪರ್‌ಚಾರ್ಜರ್ ನೆಟ್‌ವರ್ಕ್‌ ಸ್ಥಾಪಿಸುವುದಾಗಿಯೂ ಅದು ಹೇಳಿದೆ.

ತನ್ನ ಮೊದಲ ತಯಾರಿಕಾ ಘಟಕ ಸ್ಥಾಪಿಸಲು ತಮಿಳುನಾಡಿನಲ್ಲಿ ₹ 2,400 ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯು ಕಳೆದ ವರ್ಷ ಘೋಷಿಸಿತ್ತು. ಈ ಹೂಡಿಕೆಯಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದೆ.

‘ನಾವು ಜೂನ್ ವೇಳೆಗೆ ತಯಾರಿಕಾ ಘಟಕ ಸ್ಥಾಪಿಸುತ್ತೇವೆ. ಅದು ಆರಂಭದಲ್ಲಿ 20 ಲಕ್ಷ ತಯಾರಿಕಾ ಸಾಮರ್ಥ್ಯ ಹೊಂದಲಿದ್ದು, 12 ತಿಂಗಳುಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು’ ಎಂದು ಓಲಾ ಅಧ್ಯಕ್ಷ ಭವಿಷ್‌ ಅಗರ್ವಾಲ್‌ ಹೇಳಿದ್ದಾರೆ.

ಕಂಪನಿಯು ಇ–ಸ್ಕೂಟರ್‌ನ ಬೆಲೆಯನ್ನು ಇನ್ನಷ್ಟೇ ತಿಳಿಸಬೇಕಿದೆ. ಮೊದಲ ವರ್ಷದಲ್ಲಿ ದೇಶದ 100 ನಗರಗಳಲ್ಲಿ 5 ಸಾವಿರ ಚಾರ್ಜಿಂಗ್‌ ಕೇಂದ್ರಗಳು ನಿರ್ಮಾಣ ಆಗಲಿವೆ. ಈ ಹೈಪರ್‌ಚಾರ್ಜರ್‌ ನೆಟ್‌ವರ್ಕ್‌ಗಳು 18 ನಿಮಿಷಗಳಲ್ಲಿ ಶೇ 50ರಷ್ಟು ಚಾರ್ಜ್‌ ಮಾಡುವ ಸಾಮರ್ಥ್ಯ ಹೊಂದಿವೆ. ಮಾಲ್‌ಗಳು, ಐ.ಟಿ. ಪಾರ್ಕ್‌ಗಳು, ಕಚೇರಿ ಆವರಣಗಳು ಮತ್ತು ಕೆಫೆಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳು ಇರಲಿವೆ. ಓಲಾ ಎಲೆಕ್ಟ್ರಿಕ್‌ ಆ್ಯಪ್‌ ಮೂಲಕ ಚಾರ್ಜಿಂಗ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಆಗಿಂದಾಗ್ಗೆ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT