ಮಂಗಳವಾರ, ನವೆಂಬರ್ 19, 2019
28 °C

ಒನ್‌ ಪ್ಲಸ್‌ ಮೊಬೈಲ್ ದಾಖಲೆ ಮಾರಾಟ

Published:
Updated:

ಬೆಂಗಳೂರು: ಜನಪ್ರಿಯ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್, ದೀಪಾವಳಿ ಹಬ್ಬದ ಸಂದರ್ಭದಲ್ಲಿ ₹ 1,500 ಕೋಟಿ ಮೊತ್ತದ ಮಾರಾಟ ನಡೆಸಿದೆ.

ಆಫ್‌ಲೈನ್ ಮತ್ತು ಆನ್‌ಲೈನ್ ಮಾರಾಟದಲ್ಲಿ ಈ ದಾಖಲೆಯ ಮಾರಾಟ ದಾಖಲಿಸಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಸ್ಮಾರ್ಟ್‌ಫೋನ್‌ಗಳು ಅತ್ಯಧಿಕವಾಗಿ ಮಾರಾಟವಾಗಿವೆ. ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟ ಸಂದರ್ಭದಲ್ಲಿ ಮತ್ತು ಅದರ ಆಫ್‌ಲೈನ್ ಪಾಲುದಾರ ಮಳಿಗೆಗಳಲ್ಲಿ ಒನ್‌ಪ್ಲಸ್ ಸ್ಮಾರ್ಟ್ ಟಿವಿ ಮತ್ತು ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.

‘ಈ ಯಶಸ್ಸು ಇನ್ನೂ ಅತ್ಯುತ್ತಮ ತಂತ್ರಜ್ಞಾನ ಒಳಗೊಂಡ ಸ್ಮಾರ್ಟ್‌ ಉತ್ಪನ್ನಗಳನ್ನು ಪರಿಚಯಿಸಲು ಪ್ರೇರಣೆಯಾಗಿದೆ’ ಎಂದು ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‌ವಾಲ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)