ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಪ್ಪೊ ಕ್ಯಾಶ್‌’ ಸೇವೆ ಆರಂಭ

ಮ್ಯೂಚುವಲ್ ಫಂಡ್, ಸಾಲ, ಮೊಬೈಲ್ ಸ್ಕ್ರೀನ್ ವಿಮೆ, ಕ್ರೆಡಿಟ್ ಸ್ಕೋರ್‌ ಲಭ್ಯ
Last Updated 4 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ಒಪ್ಪೊ ಸಂಸ್ಥೆಯು ಭಾರತದಲ್ಲಿ ‘ಒಪ್ಪೊ ಕ್ಯಾಶ್’ (OPPO Kash) ಹೆಸರಿನಲ್ಲಿ ಹಣಕಾಸು ಸೇವೆ ಒದಗಿಸಲು ಮುಂದಾಗಿದೆ.

ಭಾರತದ ಹೊಸ ತಲೆಮಾರಿನ ಜನರ ಬೆಳೆಯುತ್ತಿರುವ ಹಣಕಾಸು ಅಗತ್ಯಗಳನ್ನು ಒಂದೇ ವೇದಿಕೆಯಡಿ ಒದಗಿಸುವುದೇ ‘ಒಪ್ಪೊ ಕ್ಯಾಶ್’ ಉದ್ದೇಶ.ಒಪ್ಪೊ ಸ್ಮಾರ್ಟ್ ಫೋನ್‌ನಲ್ಲಿ 'ಒಪ್ಪೊ ಕ್ಯಾಶ್' ಆ್ಯಪ್ ಇನ್ಸ್ಟಾಲ್ ಮಾಡಲಾಗಿರುತ್ತದೆ. ಬೇರೆ ಫೋನ್‌ಗಳಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಏನೇನು ಸೌಲಭ್ಯ: ಒಂದೇ ಆ್ಯಪ್‌ನಲ್ಲಿ ಹಲವು ಹಣಕಾಸು ಸೇವೆಗಳು ಲಭ್ಯವಿವೆ.ಮ್ಯೂಚುವಲ್ ಫಂಡ್ ಹೂಡಿಕೆ, ಸಾಲ, ಮೊಬೈಲ್ ಸ್ಕ್ರೀನ್ ವಿಮೆ, ಕ್ರೆಡಿಟ್ ಸ್ಕೋರ್‌ನಂತ ವೈವಿಧ್ಯಮಯ ಸವಲತ್ತು ಸಿಗಲಿವೆ.ಅರ್ಹತೆ ಆಧರಿಸಿ ₹2 ಲಕ್ಷ ರೂವರೆಗೆ ವೈಯಕ್ತಿಕ ಸಾಲ, ₹2 ಕೋಟಿವರೆಗೆ ವ್ಯಾಪಾರ ಸಾಲ ಸಿಗಲಿದೆ. ಬ್ಯಾಂಕಿಗೆ ತೆರಳಿ ಅರ್ಜಿ ಸಲ್ಲಿಸಿ, ಕಾಯುವ ಪ್ರಮೇಯ ಇರುವುದಿಲ್ಲ ಎನ್ನುತ್ತಾರೆ ಕಂಪನಿಯ ಪ್ರಾಡಕ್ಟ್ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ಸುಮಿತ್ ವಾಲಿಯಾ.

ಆರಂಭಿಕ ಯೋಜನೆಯಾಗಿ ‘ಫ್ರೀಡಂ ಎಸ್‌ಐಪಿ’ಯನ್ನು ಸಂಸ್ಥೆ ಪರಿಚಯಿಸಿದೆ. ಇಲ್ಲಿ ಕನಿಷ್ಠ ₹100 ಮೂಲಕ ಗ್ರಾಹಕರು ಮ್ಯೂಚುವಲ್ ಫಂಡ್ ಹೂಡಿಕೆ ಆರಂಭಿಸಬಹುದು ಎಂದು ಒಪ್ಪೊ ಕ್ಯಾಶ್‌ ಮುಖ್ಯಸ್ಥ ಜಾಫರ್ ಇಮಾಮ್ ತಿಳಿಸಿದರು.ಮುಂದಿನ ಆರು ತಿಂಗಳಲ್ಲಿ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ. 5 ವರ್ಷದಲ್ಲಿ 1 ಕೋಟಿ ಬಳಕೆದಾರರನ್ನು ಹೊಂದಲು ಉದ್ದೇಶಿಸಲಾಗಿದೆ.

ಪಾವತಿ, ಉಳಿತಾಯ, ವಿಮೆ, ಶಿಕ್ಷಣ ಸಾಲ, ಮತ್ತು ದೇಶದಲ್ಲಿ ಮೊದಲ ಬಾರಿಗೆ ಆರ್ಥಿಕ ಯೋಗಕ್ಷೇಮ ಸ್ಕೋರ್ ಒದಗಿಸುವಹೊಸ ಸೇವೆಗಳನ್ನು ಮುಂದಿನ ಒಂದೂವರೆ ವರ್ಷದಲ್ಲಿ ಆರಂಭಿಸುವಮಹತ್ವಾಕಾಂಕ್ಷೆಯನ್ನು ಸಂಸ್ಥೆ ಹೊಂದಿದೆ.ಮ್ಯೂಚುವಲ್ ಫಂಡ್, ಸಾಲ, ವಿಮೆ ಸೇವೆಗಳ ಬಗ್ಗೆ ಮಾಹಿತಿ ನೀಡಲು ಗ್ರಾಹಕ ಸೇವಾ ತಂಡವನ್ನು ರಚಿಸಲಾಗಿದೆ. ಡೇಟಾ ಗೋಪ್ಯತೆ ಕಾಪಾಡುವುದು ಮತ್ತು ಎಲ್ಲಾ ಡೇಟಾವನ್ನು ದೇಶದಲ್ಲಿ ಸಂಗ್ರಹಿಸಿ ನಿಯಮಾವಳಿಗಳನ್ನು ಪಾಲಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ.

(ಕಂಪನಿಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ತೆರಳಿದ್ದರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT