ಮಂಗಳೂರು: ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮಹಾಬಲೇಶ್ವರ ಎಂ.ಎಸ್. ಪುನರಾಯ್ಕೆಯಾಗಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆಯಂತೆ ಎರಡನೇ ಅವಧಿಗೆ ಪುನರಾಯ್ಕೆಗೊಂಡಿದ್ದು, ಪಿ.ಜಯರಾಮ ಭಟ್ 2021 ನವೆಂಬರ್ 13ರ ತನಕ ಹಾಗೂ ಮಹಾಬಲೇಶ್ವರ ಎಂ.ಎಸ್ 2023ರ ಏಪ್ರಿಲ್ 14ರ ತನಕ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
‘ಒಂದು ಕೋಟಿಗೂ ಮಿಕ್ಕಿದ ಗ್ರಾಹಕರು, 8,500ಕ್ಕೂ ಹೆಚ್ಚು ಸಹೋದ್ಯೋಗಿಗಳ ಸಹಕಾರದಿಂದ ಬ್ಯಾಂಕ್ ಉನ್ನತಿ ಸಾಧಿಸುತ್ತಿದೆ. ಜಾಗತಿಕವಾಗಿ ಕೋವಿಡ್–19 ಸಂಕಷ್ಟ ಎದುರಾಗಿದ್ದು, ಬ್ಯಾಂಕ್ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿದೆ. ನಮ್ಮ ಅವಧಿಯಲ್ಲಿ ಉತ್ತಮ ಆಡಳಿತ, ಮೌಲ್ಯ ಸಂವರ್ಧನೆಗೆ ಅವಿರತ ಶ್ರಮಿಸಲಾಗುವುದು’ ಎಂದು ಮಹಾಬಲೇಶ್ವರ ಎಂ.ಎಸ್. ಪ್ರತಿಕ್ರಿಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.