ಸೋಮವಾರ, ಆಗಸ್ಟ್ 2, 2021
21 °C
PAI INTERNATIONAL DRAW

ಪೈ ಇಂಟರ್‌ ನ್ಯಾಷನಲ್‌ ಬಹುಮಾನ ಘೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೃಹೋಪಯೋಗಿ ಸಲಕರಣೆ, ಟಿವಿ, ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತಿತರ ಗ್ರಾಹಕ ಬಳಕೆ ಸರಕುಗಳ ಸರಣಿ ಮಾರಾಟ ಸಂಸ್ಥೆ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌, ತನ್ನ 20ನೇ ವರ್ಷಾಚರಣೆ ಅಂಗವಾಗಿ ಕೂಪನ್‌ ಆಫರ್‌ ಯೋಜನೆಯಡಿ ನಡೆಸಿದ್ದ ವಿಶೇಷ ಮಾರಾಟದ ಅದೃಷ್ಟಶಾಲಿ ಬಹುಮಾನ ವಿಜೇತರನ್ನು ಡ್ರಾ ಮೂಲಕ ಘೋಷಿಸಿದೆ.

ಈ ಕೂಪನ್‌ ಆಫರ್‌ ಯೋಜನೆಯು ಈ ವರ್ಷದ ಫೆಬ್ರುವರಿ ಅಂತ್ಯದಿಂದ ಮೇ ಅಂತ್ಯದವರೆಗೆ ನಡೆದಿತ್ತು. ₹ 20 ಲಕ್ಷದ ನಗದು ಬಹುಮಾನ ಸೇರಿದಂತೆ ಒಟ್ಟು ₹ 3 ಕೋಟಿ ಮೊತ್ತದ ಬಹುಮಾನ ನೀಡಲಾಗಿದೆ.

ಡ್ರಾ ಮೂಲಕ ಆಯ್ಕೆ ಮಾಡಲಾದ ಅದೃಷ್ಟಶಾಲಿ ಮೊದಲ ಬಹುಮಾನ ವಿಜೇತರ ಕೂಪನ್‌ನಲ್ಲಿನ ಕೊನೆಯ 6 ಅಂಕಿಗಳ ವಿವರ ಹೀಗಿದೆ. ಮೊದಲ ಬಹುಮಾನ ₹ 20 ಲಕ್ಷ – (398163), ಪೈ ಮಳಿಗೆಗಳಲ್ಲಿ 50 ಜನರಿಗೆ ₹ 50 ಸಾವಿರ ಮೊತ್ತದ ಶಾಪಿಂಗ್‌ –ಕೊನೆಯ 4 ಅಂಕಿಗಳು (4890), 50 ಜನರಿಗೆ ₹ 9,999 ಮೊತ್ತದ ಉಚಿತ ಖರೀದಿ (4950), ₹ 5 ಸಾವಿರ ಮೊತ್ತದ ಖರೀದಿ ಸೌಲಭ್ಯ 50 ಜನರಿಗೆ (7766), ₹ 2,500 ಮೊತ್ತದ ಖರೀದಿ ವಿಜೇತ 250 ಜನರು ( 1353, 5578, 7851, 8548, 9036 ಮತ್ತು 25 ಸಾವಿರ ಜನರಿಗೆ ₹ 2 ಸಾವಿರ ಮೊತ್ತದ ಲಾಯಲ್ಟಿ ಪಾಯಿಂಟ್ಸ್‌ – ಕೊನೆಯ ಎರಡು ಅಂಕಿಗಳು (09, 25, 46, 60, ಮತ್ತು 88).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು