ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲೀಕರಣಕ್ಕೆ ವೇಗ ನೀಡಿದ ಕೋವಿಡ್‌: ಎನ್‌ಪಿಸಿಐನ ಸಿಒಒ ಅಭಿಪ್ರಾಯ

Last Updated 12 ಡಿಸೆಂಬರ್ 2020, 10:12 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ದೊರೆತಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಸಿಒಒ ಪ್ರವೀಣಾ ರೈ ಶನಿವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಜಾರಿಗೊಳಿಸಿರುವ ನಿಯಂತ್ರಣ ವ್ಯವಸ್ಥೆಗಳಿಂದಾಗಿಯೂ ಡಿಜಿಟಲೀಕರಣಕ್ಕೆ ಬೆಂಬಲ ದೊರೆತಿದೆ ಎಂದೂ ಅವರು ತಿಳಿಸಿದ್ದಾರೆ.

ಜೆಮ್‌ಶೆಡ್‌ಪುರದ ಕ್ಷೇವಿಯರ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಆಫ್‌ಲೈನ್‌ ಮತ್ತು ಆನ್‌ಲೈನ್‌ ವಹಿವಾಟು ನಡೆಸುವಾಗ ಗ್ರಾಹಕರು ನಗದು ರೂಪದಲ್ಲಿ ಹಣ ನೀಡುವುದಕ್ಕೆ ಬದಲಾಗಿ ಡಿಜಿಟಲ್‌ ಸೌಲಭ್ಯಗಳ ಮೂಲಕ ಪಾವತಿಸುವುದು ಹೆಚ್ಚಾಗುತ್ತಿದೆ. ಜನರು, ಗ್ರಾಹಕರು ಮತ್ತು ವರ್ತಕರು ಎಲ್ಲರೂ ಡಿಜಿಟಲ್‌ ಸೌಲಭ್ಯಗಳನ್ನು ಬಳಸುತ್ತಿದ್ದಾರೆ. ಅದರಲ್ಲಿಯೂ ಯುಪಿಐ ಆಧಾರಿತ ಕ್ಯುಆರ್‌ ಕೋಡ್‌ ಬಳಕೆ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ’ ಎಂದು ಅವರು ವಿವರಿಸಿದ್ದಾರೆ.

‘ಡಿಜಿಟಲ್‌ ಪಾವತಿ ಉತ್ತೇಜಿಸಲು ಗ್ರಾಹಕರಿಗೆ ಬಹುಮಾನಗಳನ್ನು ಕೊಡುತ್ತಿರುವುದರಿಂದಲೂ ನಗದು ರಹಿತ ಪಾವತಿ ಹೆಚ್ಚಾಗಲು ಕಾರಣವಾಗುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಯುಪಿಐ ಬಳಕೆ ಹೆಚ್ಚಾಗಿದೆ. ಡಿಜಿಟಲೀಕರಣವು ಗ್ರಾಹಕರಲ್ಲಿ ಉಳಿತಾಯ ಪ್ರವೃತ್ತಿಯನ್ನೂ ಬೆಳೆಸುತ್ತಿದ್ದು, ಅದರಿಂದ ವಿತ್ತೀಯ ಒಳಗೊಳ್ಳುವಿಕೆ ಸಾಧ್ಯವಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT