ನವದೆಹಲಿ: ಪ್ರಯಾಣಿಕ ವಾಹನಗಳ ಸಗಟು ಮಾರಾಟವು ನವೆಂಬರ್ ತಿಂಗಳಲ್ಲಿ ಶೇಕಡ 28ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಸಂಘ (ಎಸ್‌ಐಎಎಂ) ಮಂಗಳವಾರ ತಿಳಿಸಿದೆ.

ಕಂಪನಿಗಳಿಂದ ಡೀಲರ್‌ಗಳಿಗೆ ಒಟ್ಟು 2.76 ಲಕ್ಷ ವಾಹನಗಳು ರವಾನೆಯಾಗಿವೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಒಟ್ಟು 2.15 ಲಕ್ಷ ವಾಹನಗಳು ರವಾನೆಯಾಗಿದ್ದವು.

‘ಗ್ರಾಹಕರಿಂದ ಬಂದ ಒಳ್ಳೆಯ ಬೇಡಿಕೆಯು ವಾಹನಗಳ ಮಾರಾಟ ಹೆಚ್ಚಲು ಕಾರಣವಾಗಿದೆ’ ಎಂದು ಎಸ್‌ಐಎಎಂ ಅಧ್ಯಕ್ಷ ವಿನೋದ್ ಅಗರ್ವಾಲ್ ಹೇಳಿದ್ದಾರೆ. ಆದರೆ, ಅಕ್ಟೋಬರ್ ತಿಂಗಳಲ್ಲಿ ಆಗಿದ್ದ ಸಗಟು ಮಾರಾಟಕ್ಕೆ ಹೋಲಿಸಿದರೆ ನವೆಂಬರ್ ಮಾರಾಟವು ತುಸು ಕಡಿಮೆ ಆಗಿದೆ.

ಪ್ರಯಾಣಿಕ ವಾಹನಗಳ ಮಾರಾಟವು ಈ ವರ್ಷ (2022–23) ನವೆಂಬರ್‌ವರೆಗೆ ದಾಖಲೆಯ ಹೆಚ್ಚಿನ ಮಟ್ಟದಲ್ಲಿದೆ. ಆದರೆ ತ್ರಿಚಕ್ರ ವಾಹನಗಳ ಮಾರಾಟವು 2010–11ನೆಯ ಸಾಲಿಗಿಂತ ಕಡಿಮೆ ಇದೆ. ದ್ವಿಚಕ್ರ ವಾಹನಗಳ ಮಾರಾಟವು 2016–17ನೆಯ ಸಾಲಿಗಿಂತ ಕಡಿಮೆ ಇದೆ ಎಂದು ಎಸ್‌ಐಎಎಂ ಮಹಾನಿರ್ದೇಶಕ ರಾಜೇಶ್ ಮೆನನ್ ತಿಳಿಸಿದ್ದಾರೆ.

ಬಡ್ಡಿ ದರ ಹೆಚ್ಚಾಗುತ್ತಿರುವುದು ಹಾಗೂ ದೀರ್ಘಾವಧಿಯ ವಿಮಾ ಪ್ರೀಮಿಯಂ ಮೊತ್ತ ಜಾಸ್ತಿ ಆಗಿರುವುದು ಗ್ರಾಹಕರ ಪಾಲಿಗೆ ಚಿಂತೆಗೆ ಕಾರಣವಾಗಿವೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.