ಐಟಿ ರಿಟರ್ನ್ಸ್‌ಗೆ ಪಾನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಕಾರ್ಡ್ ಸಾಕು

ಸೋಮವಾರ, ಜೂಲೈ 22, 2019
24 °C

ಐಟಿ ರಿಟರ್ನ್ಸ್‌ಗೆ ಪಾನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಕಾರ್ಡ್ ಸಾಕು

Published:
Updated:

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆ (ಐಟಿ ರಿಟರ್ನ್ಸ್)ಗಾಗಿ ತೆರಿಗೆದಾರರು ಇನ್ನು ಮುಂದೆ ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್ ಬಳಸುವಂತೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ  ಹೇಳಿದ್ದಾರೆ.

120 ಕೋಟಿಗಿಂತ ಹೆಚ್ಚು ಭಾರತೀಯರು ಆಧಾರ್ ಕಾರ್ಡ್ ಹೊಂದಿದ್ದಾರೆ. ಹೀಗಿರುವಾಗ ತೆರಿಗೆದಾರರಿಗೆ ಲೆಕ್ಕ ಪತ್ರ ಸಲ್ಲಿಕೆ ಸುಲಭವಾಗುವಂತೆ ಮಾಡಲು ಪಾನ್ ಕಾರ್ಡ್ ಬದಲು ಆಧಾರ್ ಕಾರ್ಡ್ ಬಳಸುವಂತೆ ಮಾಡಲು ನಾನು ಶಿಫಾರಸು ಮಾಡಲಿದ್ದೇನೆ. ಸಂಸತ್ತಿನಲ್ಲಿ ಇದಕ್ಕೆ ಹಸಿರು ನಿಶಾನೆ ಸಿಕ್ಕಿದರೆ ಪಾನ್ ಕಾರ್ಡ್ ಇಲ್ಲದಿರುವವರಿಗೆ ಆಧಾರ್ ಕಾರ್ಡ್ ಬಳಸಿ ಲೆಕ್ಕಪತ್ರ ಸಲ್ಲಿಸಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಐಟಿ ರಿಟರ್ನ್ಸ್ ಸಲ್ಲಿಸಲು ಪಾನ್ ಕಾರ್ಡ್ ಕಡ್ಡಾಯವಾಗಿತ್ತು. ಇದಕ್ಕಾಗಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಕೂಡಾ ಕಡ್ಡಾಯ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !