ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ: ಪ್ರವಾಸಕ್ಕಾಗಿ ಮಹಿಳೆಯರಿಗೆ ವಿಶಿಷ್ಟ ಸೇವೆ ಆರಂಭ

Published 25 ಏಪ್ರಿಲ್ 2024, 9:31 IST
Last Updated 25 ಏಪ್ರಿಲ್ 2024, 9:31 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಪ್ರವಾಸಕ್ಕೆ ಮಹಿಳಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಪೇಟಿಎಂ ಆ್ಯಪ್‌ನಲ್ಲಿ ‘ಬುಕಿಂಗ್ ಫಾರ್ ಫೀಮೇಲ್’ ಎಂಬ ವಿಶಿಷ್ಟ ಸೇವೆಯನ್ನು ಪರಿಚಯಿಸಲಾಗಿದೆ.

ಪ್ರವಾಸಕ್ಕೆ ತೆರಳುವ ಮಹಿಳೆಯರಿಗೆ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಇದು ನೆರವಾಗಲಿದೆ ಎಂದು ಪೇಟಿಎಂ ಕಂಪನಿ ತಿಳಿಸಿದೆ.

ಸೌಲಭ್ಯ ‍‍ಪಡೆಯುವುದು ಹೇಗೆ?: ಆ್ಯಪ್‌ನಲ್ಲಿರುವ ಟಿಕೆಟ್‌ ಬುಕಿಂಗ್‌ ವಿಭಾಗದಲ್ಲಿ ಮೊದಲಿಗೆ ‘ಬಸ್‌ ಟಿಕೆಟ್‌’ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಪ್ರಯಾಣದ ವಿವರ ನಮೂದಿಸಬೇಕು. ನಂತರ ‘ಬುಕಿಂಗ್ ಫಾರ್ ಫೀಮೇಲ್’ ಆಯ್ಕೆ ಮೂಲಕ ಆಸನವನ್ನು ಆಯ್ಕೆ ಮಾಡಿಕೊಂಡು ವಿವರ ನಮೂದಿಸಬೇಕು. ಅಂತಿಮವಾಗಿ ಬಟಲ್‌ ಒತ್ತಿದ ಬಳಿಕ ಇ–ಟಿಕೆಟ್‌  ದೊರೆಯಲಿದೆ ಎಂದು ವಿವರಿಸಿದೆ.

ಮಹಿಳೆಯರಿಗೆ ಸುರಕ್ಷತೆ ಹಾಗೂ ಸುಖಕರ ಪ್ರವಾಸಕ್ಕಾಗಿ ಈ ಸೇವೆ ಒದಗಿಸಲಾಗಿದೆ. ಪೇಟಿಎಂ ಈ ಸೇವೆ ಒದಗಿಸಿದ ಪ್ರಥಮ ಆನ್‌ಲೈನ್‌ ವೇದಿಕೆಯಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT