ಶನಿವಾರ, ಮೇ 8, 2021
24 °C

ಯು‍ಪಿಐ ವಹಿವಾಟಿನಲ್ಲಿ ಪೇಟಿಎಂ ಮುಂದೆ: ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುಪಿಐ ವಹಿವಾಟುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಯಶಸ್ಸನ್ನು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್ (ಪಿಪಿಬಿಎಲ್‌) ದಾಖಲಿಸಿದೆ ಎಂಬುದನ್ನು ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ಇತ್ತೀಚಿನ ವರದಿ ಹೇಳಿದೆ.

ಯುಪಿಐ ವ್ಯವಸ್ಥೆಯ ಮೂಲಕ ಹಣ ಪಾವತಿ ಮಾಡುವಾಗ, ಪಾವತಿ ವಿಫಲವಾಗಿದ್ದು ಪಿಪಿಬಿಎಲ್‌ನಲ್ಲಿ ಅತ್ಯಂತ ಕಡಿಮೆ. ಇತರ ಬ್ಯಾಂಕ್‌ಗಳ ಮೂಲಕ ನಡೆದ ಪಾವತಿಗಳಲ್ಲಿ ಸರಿಸುಮಾರು ಶೇಕಡ 1ರಷ್ಟು ವೈಫಲ್ಯ ಕಾಣುತ್ತಿದ್ದವು. ಆದರೆ, ‍‘ನಮ್ಮ ಬ್ಯಾಂಕ್‌ ಮೂಲಕ ನಡೆದ ಪಾವತಿಗಳಲ್ಲಿ ವೈಫಲ್ಯದ ಪ್ರಮಾಣ ಇದ್ದಿದ್ದು ಶೇಕಡ 0.02ರಿಂದ ಶೇಕಡ 0.04ರಷ್ಟು ಮಾತ್ರ. ಇದು ನಮ್ಮ ತಾಂತ್ರಿಕ ಮೂಲಸೌಕರ್ಯದ ಶ್ರೇಷ್ಠತೆಯನ್ನು ಸಾಬೀತು ಮಾಡಿದೆ’ ಎಂದು ಪಿಪಿಬಿಎಲ್‌ ಪ್ರಕಟಣೆ ತಿಳಿಸಿದೆ.

ಬೇರೆ ಬ್ಯಾಂಕ್‌ಗಳ ಗ್ರಾಹಕರು ಯುಪಿಐ ವಹಿವಾಟುಗಳನ್ನು ಅದೇ ಬ್ಯಾಂಕ್‌ ಅಭಿವೃದ್ಧಿಪಡಿಸಿದ ಆ್ಯಪ್‌ ಮೂಲಕ ನಡೆಸುವುದು ಕಡಿಮೆ. ಆದರೆ, ಪಿಪಿಬಿಎಲ್‌ ಗ್ರಾಹಕರು ಯುಪಿಐ ವಹಿವಾಟುಗಳನ್ನು ಪೇಟಿಎಂ ಮೂಲಕವೇ ಮಾಡುತ್ತಾರೆ. ಪಿಪಿಬಿಎಲ್‌ ಈಗಾಗಲೇ 10 ಕೋಟಿ ಯುಪಿಐ ವಿಳಾಸಗಳನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ನಮ್ಮ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಹಾಗೂ ಹೊಸ ಸೇವೆಗಳನ್ನು ನೀಡಲು ‌ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ಇತರರಿಗಿಂತ ನಾವು ಮುಂದಿದ್ದೇವೆ’ ಎಂದು ಪಿಪಿಬಿಎಲ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸತೀಶ್ ಗುಪ್ತ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು