ಗುರುವಾರ , ನವೆಂಬರ್ 26, 2020
21 °C
ಪ್ರತಿ ವಹಿವಾಟಿಗೂ ಕ್ಯಾಶ್‌ಬ್ಯಾಕ್‌ ಹಾಗೂ ಪಾಯಿಂಟ್‌ ಸಿಗಲಿದೆ

ಕ್ರೆಡಿಟ್ ಕಾರ್ಡ್‌ ವಹಿವಾಟಿಗೆ ಪೇಟಿಎಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುವ ಕಂಪನಿಗಳ ಜೊತೆಗೂಡಿ ತಾನು ಕೂಡ ಕ್ರೆಡಿಟ್ ಕಾರ್ಡ್ ವಹಿವಾಟು ಆರಂಭಿಸುವುದಾಗಿ ಪೇಟಿಎಂ ಹೇಳಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಒಟ್ಟು 20 ಲಕ್ಷ ಜನರಿಗೆ ಕ್ರೆಡಿಟ್ ಕಾರ್ಡ್ ವಿತರಿಸುವ ಗುರಿಯನ್ನು ಅದು ಹೊಂದಿದೆ.

ಕ್ರೆಡಿಟ್ ಕಾರ್ಡ್ ಬಳಸುವ ಸಂಸ್ಕೃತಿಯಿಂದ ಹೊರಗೆ ಇರುವವರನ್ನು ಅದರತ್ತ ಸೆಳೆದು, ಕ್ರೆಡಿಟ್ ಕಾರ್ಡ್ ಮಾರುಕಟ್ಟೆಯಲ್ಲಿ ಬದಲಾವಣೆ ತರುವುದು ತನ್ನ ಉದ್ದೇಶ ಎಂದು ಪೇಟಿಎಂ ಹೇಳಿದೆ.

‘ಕ್ರೆಡಿಟ್ ಕಾರ್ಡ್‌ ಸೌಲಭ್ಯ ನೀಡುವ ಕಂಪನಿಗಳ ಜೊತೆ ಸೇರಿ ಕ್ರೆಡಿಟ್ ಕಾರ್ಡ್ ನೀಡಲಾಗುವುದು’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲು ಅವಕಾಶಗಳು ಸೀಮಿತವಾಗಿರುವುದು, ದಾಖಲಾತಿ ಸಲ್ಲಿಸುವ ಪ್ರಕ್ರಿಯೆ ಕಠಿಣವಾಗಿರುವುದು ಮತ್ತು ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಗೆ ಬಹಳ ಸಮಯ ಬೇಕಿರುವ ಕಾರಣ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಪ್ರಮಾಣ ಶೇಕಡ 3ರಷ್ಟು ಮಾತ್ರ ಇದೆ ಎಂದು ಕಂಪನಿ ಹೇಳಿದೆ.

ಅಂತರರಾಷ್ಟ್ರೀಯ ವಹಿವಾಟುಗಳನ್ನು ನಡೆಸುವ ಅಗತ್ಯ ಇಲ್ಲದಿದ್ದಾಗ, ಆ ಸೌಲಭ್ಯವನ್ನು ಸ್ಥಗಿತ ಮಾಡಿಟ್ಟುಕೊಳ್ಳುವ ಸೌಲಭ್ಯ ಕೂಡ ಇರಲಿದೆ. ಇದರಿಂದಾಗಿ ಕಾರ್ಡ್‌ನ ದುರ್ಬಳಕೆಯನ್ನು ತಪ್ಪಿಸಬಹುದು. ವಂಚನೆಯ ವಹಿವಾಟುಗಳಿಂದ ಕಾರ್ಡ್‌ ಬಳಕೆದಾರರಿಗೆ ವಿಮೆಯ ರಕ್ಷಣೆ ಇರುತ್ತದೆ ಎಂದೂ ಅದು ತಿಳಿಸಿದೆ.

ಬಳಕೆದಾರರು ಕಾರ್ಡ್‌ ಬಳಸಿ ತಾವು ಯಾವುದರ ಮೇಲೆ ಹಣ ಖರ್ಚು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸುವ ಸೌಲಭ್ಯ ಸಿಗಲಿದೆ. ಈ ಸೌಲಭ್ಯದ ಸಹಾಯದಿಂದ ಅವರು ತಮ್ಮ ಖರ್ಚುಗಳನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಪೇಟಿಎಂ ಕ್ರೆಡಿಟ್ ಕಾರ್ಡ್ ಬಳಸಿ ನಡೆಸುವ ಪ್ರತಿ ವಹಿವಾಟಿಗೂ ಕ್ಯಾಶ್‌ಬ್ಯಾಕ್‌ ಹಾಗೂ ಪಾಯಿಂಟ್‌ಗಳು ಸಿಗುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು