ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 17ನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

Last Updated 23 ಜೂನ್ 2020, 2:22 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳವು ಸತತ 17ನೇ ದಿನವೂ ಮುಂದುವರೆದಿದ್ದು, ಮಂಗಳವಾರ ಕ್ರಮವಾಗಿ 20 ಪೈಸೆ ಮತ್ತು 55 ಪೈಸೆ ಏರಿಕೆಯಾಗಿದೆ.

ನಿರಂತರ ಹೆಚ್ಚಳದಿಂದ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಈಗ ₹10.01ರಷ್ಟು ಮತ್ತು ಪೆಟ್ರೋಲ್‌ ಬೆಲೆ ₹8.50ರಷ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ ₹75.59 ಮತ್ತು ಪೆಟ್ರೋಲ್‌ ಬೆಲೆ ₹82.32 ಕ್ಕೆ ತಲುಪಿದೆ.

ದೆಹಲಿಯಲ್ಲಿ ಡೀಸೆಲ್‌ ದರ ₹79.40ಮತ್ತು ಪೆಟ್ರೋಲ್‌ ದರ ₹79.76ಕ್ಕೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್‌ ದರ ₹77.24 ಮತ್ತು ಪೆಟ್ರೋಲ್‌ ದರ ₹86.36ಕ್ಕೆ ಹೆಚ್ಚಳವಾಗಿದೆ.

ಇಂಧನ ದರ ಏರಿಕೆಯಿಂದ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾಗಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT