ಗುರುವಾರ , ಮಾರ್ಚ್ 23, 2023
32 °C

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಎಷ್ಟು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮಂಗಳವಾರ ದೇಶದಾದ್ಯಂತ ಹೊಸ ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ್ದು, ಪೆಟ್ರೋಲ್ ಬೆಲೆ 25 ಪೈಸೆ ಮತ್ತು 30 ಪೈಸೆ ಏರಿಕೆ ಆಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಈವರೆಗಿನ ಗರಿಷ್ಠ ಮಟ್ಟವಾದ ₹102.64 ಮತ್ತು ಮುಂಬೈನಲ್ಲಿ ₹ 108.67ಕ್ಕೆ ಏರಿದೆ.

ಡೀಸೆಲ್ ದರ ಸಹ ದೆಹಲಿಯಲ್ಲಿ ₹ 91.07 ಮತ್ತು ಮುಂಬೈನಲ್ಲಿ ₹ 98.80ರ ಗರಿಷ್ಠ ದಾಖಲೆಯನ್ನು ಮುಟ್ಟಿದೆ.

ಇತ್ತ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹106.21 ಆಗಿದ್ದು, ಡೀಸೆಲ್ ದರ ₹96.66ಕ್ಕೆ ಜಿಗಿದಿದೆ.

ಇನ್ನು, ರಾಜಸ್ಥಾನದ ಜೈಪುರದಲ್ಲಿ ಅಕ್ಟೋಬರ್ 3ರಂದೇ ₹ 100 ದಾಟಿದ್ದ ಡೀಸೆಲ್ ದರ ಇಂದು ₹100.42 ರಷ್ಟಾಗಿದೆ.

ಸ್ಥಳೀಯ ತೆರಿಗೆಗಳನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆಗಳು ಭಿನ್ನವಾಗಿರುತ್ತವೆ.

ಜಾಗತಿಕ ಉತ್ಪಾದನೆಯ ನಿರ್ಬಂಧಗಳು ಇಂಧನ ಕಂಪನಿಗಳನ್ನು ತಮ್ಮ ಸಂಗ್ರಹದಿಂದ ಹೆಚ್ಚು ಕಚ್ಚಾ ತೈಲವನ್ನು ಹೊರತೆಗೆಯುವಂತೆ ಮಾಡಿದೆ. ಹಾಗಾಗಿ, ಅಂತರರಾಷ್ಟ್ರೀಯ ತೈಲ ಬೆಲೆಗಳು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು