ಸೋಮವಾರ, ಏಪ್ರಿಲ್ 12, 2021
29 °C

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂರು ದಿನಗಳ ವಿರಾಮದ ಬಳಿಕ ಮತ್ತೆ ಶನಿವಾರ ದೇಶದಾದ್ಯಂತ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಆಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 24 ಪೈಸೆ ಹೆಚ್ಚಾಗಿ ₹ 94.22ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರ ಪ್ರತಿ ಲೀಟರಿಗೆ ₹ 16 ಪೈಸೆ ಹೆಚ್ಚಾಗಿ ₹ 86.37ಕ್ಕೆ ತಲುಪಿದೆ. ಫೆಬ್ರುವರಿ 9ರಿಂದ 27ರವರೆಗಿನ ಅವಧಿಯಲ್ಲಿ 14 ದಿನಗಳಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ ₹ 4.24 ರಷ್ಟು ಮತ್ತು ಡೀಸೆಲ್‌ ದರ ₹ 4.37ರಷ್ಟು ಏರಿಕೆ ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ 40 ಪೈಸೆ ಮತ್ತು ಡೀಸೆಲ್ ದರ 15 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ ಒಂದು ಲೀಟರ್‌ ಪೆಟ್ರೋಲ್‌ ₹ 91.17 ಮತ್ತು ಒಂದು ಲೀಟರ್‌ ಡೀಸೆಲ್‌ ₹ 81.47ಕ್ಕೆ ತಲುಪಿದೆ. ದೆಹಲಿಯಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಇದುವರೆಗೆ ಪ್ರತಿ ಲೀಟರಿಗೆ ಪೆಟ್ರೋಲ್ ದರ ₹ 4.89ರಷ್ಟು ಮತ್ತು ಡೀಸೆಲ್ ₹ 4.99ರಷ್ಟು ಏರಿಕೆ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು