ಭಾನುವಾರ, ಜುಲೈ 25, 2021
26 °C

ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ದರ ₹81.44

ಎಎನ್‌ಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಸತತ 14ನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಶನಿವಾರ ಲೀಟರ್‌ ಪೆಟ್ರೋಲ್‌ ದರ 53 ಪೈಸೆ ಹೆಚ್ಚಾಗಿ ಮಾರಾಟ ದರವು ₹ 81.44ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರ 58 ಪೈಸೆ ಹೆಚ್ಚಾಗಿ ಲೀಟರಿಗೆ ₹ 73.86ಕ್ಕೆ ತಲುಪಿದೆ.

14 ದಿನಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹7.26ರಂತೆ ಮತ್ತು ಡೀಸೆಲ್‌ ದರ ₹ 7.32ರಂತೆ ಏರಿಕೆಯಾಗಿವೆ. ಆಯಾ ರಾಜ್ಯಗಳಲ್ಲಿ ವಿಧಿಸುವ ಸ್ಥಳೀಯ ಮಾರಾಟ ದರ ಅಥವಾ ವ್ಯಾಟ್‌ ಮೇಲೆ ಇಂಧನ ದರದಲ್ಲಿ ವ್ಯತ್ಯಾಸವಾಗಲಿದೆ.

ಜೂನ್‌ 7 ರಿಂದ ಇಂಧನ ದರಗಳ ಪರಿಷ್ಕರಣೆ ಆರಂಭಿಸಲಾಗಿದ್ದು, ಶನಿವಾರದ ದರವು 2018ರ ಅಕ್ಟೋಬರ್‌ 3ರ ಬಳಿಕ ಅತ್ಯಂತ ಗರಿಷ್ಠ ಮಟ್ಟದ್ದಾಗಿದೆ. ಅಂದು ಲೀಟರ್‌ ಪೆಟ್ರೋಲ್‌ ದರ ₹ 84.67 ಹಾಗೂ ಡೀಸೆಲ್‌ ದರ ₹ 75.84 ಇತ್ತು.

ಕೇಂದ್ರ ಸರ್ಕಾರವು ಮಾರ್ಚ್‌ 14ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ₹ 3 ಏರಿಕೆ ಮಾಡಿತ್ತು. ಆ ಬಳಿಕ ಮೇನಲ್ಲಿ ಪೆಟ್ರೋಲ್‌ಗೆ ₹ 10 ಮತ್ತು ಡೀಸೆಲ್‌ಗೆ ₹  13ರಂತೆ ಗರಿಷ್ಠ ಏರಿಕೆ ಮಾಡಲಾಯಿತು. ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹2 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ವರಮಾನ ಬಂದಿದೆ. 

ತೈಲ ಮಾರಾಟ ಕಂಪನಿಗಳು ಎಕ್ಸೈಸ್‌ ಸುಂಕ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಆಗಿದ್ದ ಇಳಿಕೆಯೊಂದಿಗೆ ಅದನ್ನು ಹೊಂದಾಣಿಕೆ ಮಾಡಿಕೊಂಡಿದ್ದವು. ಆದರೆ, ಇದೀಗ ದಿನವೂ ಪೈಸೆಗಳ ಲೆಕ್ಕದಲ್ಲಿ ಗ್ರಾಹಕರ ಮೇಲೆ ಹೊರೆಯನ್ನು ಹೆಚ್ಚಿಸಲಾರಂಭಿಸಿವೆ.

ಇಂಧನ ದರ (ಲೀಟರಿಗೆ)

ನಗರ;ಪೆಟ್ರೋಲ್‌;ಡೀಸೆಲ್

ಬೆಂಗಳೂರು;₹81.44;73.86‌

ದೆಹಲಿ;₹78.88;₹77.06

ಮುಂಬೈ;₹85.70;₹76.11

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು