ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ಬೆಲೆ, ಬೆಂಗಳೂರಲ್ಲಿ ಎಷ್ಟು?

Last Updated 7 ಜನವರಿ 2021, 11:02 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆಯು ಗುರುವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 23 ಪೈಸೆ ಹೆಚ್ಚಳ ಮಾಡಿದ ಕಾರಣ, ದೆಹಲಿಯಲ್ಲಿ ಇದರ ಬೆಲೆ ₹ 84.20ಕ್ಕೆ ತಲುಪಿದೆ.

ದೆಹಲಿಯಲ್ಲಿ ಡೀಸೆಲ್ ಬೆಲೆಯಲ್ಲಿ 26 ಪೈಸೆ ಹೆಚ್ಚಳ ಆಗಿದ್ದು, ಲೀಟರ್ ಡೀಸೆಲ್ ಬೆಲೆಯು ₹ 74.39 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹ 90.83, ಡೀಸೆಲ್ ಬೆಲೆ ₹ 81.07 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ₹ 87.04ಕ್ಕೆ (25 ಪೈಸೆ ಏರಿಕೆ), ಡೀಸೆಲ್ ಬೆಲೆ ₹ 78.87ಕ್ಕೆ (28 ಪೈಸೆ ಏರಿಕೆ) ತಲುಪಿದೆ.

ಮುಂಬೈನಲ್ಲಿ ಈಗ ಡೀಸೆಲ್‌ಗೆ ನಿಗದಿಯಾಗಿರುವ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದ್ದು. ಸರಿಸುಮಾರು ಒಂದು ತಿಂಗಳಿನಿಂದ ಬೆಲೆ ಹೆಚ್ಚಳ ಮಾಡದಿದ್ದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ಪ್ರತಿದಿನವೂ ಬೆಲೆ ಪರಿಷ್ಕರಿಸುವುದನ್ನು ಬುಧವಾರದಿಂದ ಆರಂಭಿಸಿವೆ.

2018ರ ಅಕ್ಟೋಬರ್ 4ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹ 84 ಆಗಿತ್ತು. ಇದು ಈವರೆಗಿನ ಗರಿಷ್ಠ ಬೆಲೆ ಆಗಿತ್ತು. ಆ ಸಂದರ್ಭದಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕದಲ್ಲಿ ಪ್ರತಿ ಲೀಟರ್‌ಗೆ ₹ 1.5ರಷ್ಟು ಕಡಿತ ಮಾಡಿತ್ತು. ಇದರ ಜೊತೆಯಲ್ಲೇ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಲೀಟರ್‌ಗೆ ₹ 1 ತಗ್ಗಿಸಿದ್ದವು. ಆದರೆ, ಈಗ ತೆರಿಗೆ ಕಡಿಮೆ ಮಾಡುವ ಪ್ರಸ್ತಾವ ಇಲ್ಲ ಎಂದು ಸರ್ಕಾರದ ಅಧಿಕಾರಿಯೊಬ್ಬರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT