ಶನಿವಾರ, ಜೂಲೈ 4, 2020
24 °C

ಪಿಎಫ್‌: ಶೇ 75 ರಷ್ಟು ಹಣ ಪಡೆಯಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರು ನಿರುದ್ಯೋಗಿಯಾದ ಒಂದು ತಿಂಗಳ ಬಳಿಕ ತಮ್ಮ ಖಾತೆಯಲ್ಲಿನ ಶೇ 75 ರಷ್ಟು ಹಣ ವಾಪಸ್‌ ಪಡೆಯುವ ಆಯ್ಕೆಯನ್ನು ಕಲ್ಪಿಸಲಾಗಿದೆ.

ನಿರುದ್ಯೋಗಿಯಾದ ಎರಡು ತಿಂಗಳ ಬಳಿಕ ಖಾತೆಯಲ್ಲಿ ಉಳಿದಿರುವ  ಶೇ 25 ರಷ್ಟು ಹಣ ವಾಪಸ್‌ ಪಡೆಯುವ ಆಯ್ಕೆಯನ್ನೂ ನೀಡಿದೆ.

ಚಂದಾದಾರರು ಎರಡೂ ಆಯ್ಕೆಗಳಲ್ಲಿಯೂ ಬೇರೆ ಉದ್ಯೋಗ ಸಿಗುವವರೆಗೂ ತಮ್ಮ ಖಾತೆಯನ್ನು ಹಾಗೆಯೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. 

‘1952ರ ಇಪಿಎಫ್‌ಒನ ಹೊಸ ನಿಯಮದ ಅನ್ವಯ ಚಂದಾದಾರರಿಗೆ ಈ ಆಯ್ಕೆಗಳನ್ನು ನೀಡಲಾಗಿದೆ’ ಎಂದು ಸಂಘಟನೆಯ ಕೇಂದ್ರೀಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್ ಗಂಗ್ವಾರ್‌ ತಿಳಿಸಿದ್ದಾರೆ.

ಇಪಿಎಫ್‌ಒ ಇಟಿಎಫ್‌ ಹೂಡಿಕೆಯು ಮೇ ತಿಂಗಳ ಅಂತ್ಯಕ್ಕೆ ₹ 47,431 ಕೋಟಿಗೆ ತಲುಪಿದೆ. ಇದು ಶೀಘ್ರವೇ ₹ 1 ಲಕ್ಷ ಕೋಟಿಯನ್ನೂ ದಾಟಲಿದೆ ಎಂದು ಅವರು ಹೇಳಿದ್ದಾರೆ.

ಇಟಿಎಫ್‌ ಹೂಡಿಕೆ ಮಿತಿ ಹೆಚ್ಚಳ ಕುರಿತು ನಿರ್ಧಾರಕ್ಕೆ ಬರುವುದನ್ನು ಸಭೆ ಮುಂದೂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು