ಬುಧವಾರ, ಅಕ್ಟೋಬರ್ 21, 2020
26 °C

ಫೋನ್‌ಪೇ ಜತೆ ಯಾಹೂ ಕ್ರಿಕೆಟ್‌ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿಜಿಟಲ್ ಪಾವತಿಯ ಫೋನ್‌ಪೇ ಜತೆಗೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ತಾಣವಾಗಿರುವ ಯಾಹೂ ಕ್ರಿಕೆಟ್ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಫಲವಾಗಿ ಫೋನ್‌ಪೇನಲ್ಲಿನ ‘ಸ್ವಿಚ್ ಗಲ್ಲಿ’ ವಿಭಾಗದಲ್ಲಿ ಕ್ರಿಕೆಟ್ ಸಂಬಂಧಿಸಿದ ಸಮಗ್ರ ಮಾಹಿತಿಯು ಯಾಹೂ ಕ್ರಿಕೆಟ್‌ನಿಂದ ದೊರೆಯಲಿದೆ. ಫೋನ್‌ ಪೇ ಬಳಕೆದಾರರು ಪಾವತಿ ವಹಿವಾಟು ನಡೆಸುತ್ತಿರುವಾಗಲೇ ಕ್ರಿಕೆಟ್‌ ಪಂದ್ಯಗಳ ಸ್ಕೋರ್‌ ವೀಕ್ಷಿಸಬಹುದು, ಕ್ರಿಕೆಟ್ ಸಂಬಂಧಿತ ತಾಜಾ ಸುದ್ದಿ ಪಡೆಯಬಹುದು. ಯಾಹೂ ಕ್ರಿಕೆಟ್‌ನಿಂದ ಪಂದ್ಯಗಳ ವೀಕ್ಷಕ ವಿವರಣೆಯನ್ನೂ ಕೇಳಬಹುದು. ಐಪಿಎಲ್‌ ಪಂದ್ಯಾವಳಿ ಮುಗಿದ ನಂತರವೂ ಈ ಸೇವೆ ಮುಂದುವರೆಯಲಿದೆ.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಡಿಜಿಟಲ್‌ ಪಾವತಿ ಹೆಚ್ಚುತ್ತಿದ್ದು, ಫೋನ್‌ಪೇ ಸೇವೆ ಬಳಸುವಾಗ ಕ್ರಿಕೆಟ್‌ ಜಗತ್ತಿನಲ್ಲಿನ ಆಗುಹೋಗುಗಳನ್ನು ತಿಳಿದುಕೊಳ್ಳಲು ಈ ಪಾಲುದಾರಿಕೆಯು ಸುಲಭಗೊಳಿಸಿದೆ ಎಂದು ಫೋನ್‌ಪೇ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.