ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಬ್ರೋಕಿಂಗ್‌ ಮಾರುಕಟ್ಟೆಗೆ ಫೋನ್‌ಪೆ ಪ್ರವೇಶ

Published 30 ಆಗಸ್ಟ್ 2023, 12:21 IST
Last Updated 30 ಆಗಸ್ಟ್ 2023, 12:21 IST
ಅಕ್ಷರ ಗಾತ್ರ

ಬೆಂಗಳೂರು: ಯುಪಿಐ ಸೇರಿದಂತೆ ಹಲವು ಬಗೆಯ ಪಾವತಿ ಸೇವೆಗಳನ್ನು ನೀಡುವ ಫೋನ್‌ಪೆ ಕಂಪನಿಯು ‘ಷೇರ್‌ ಡಾಟ್‌ ಮಾರ್ಕೆಟ್‌’ ಬಿಡುಗಡೆ ಮಾಡುವ ಮೂಲಕ ಷೇರು ಬ್ರೋಕಿಂಗ್‌ ವಹಿವಾಟನ್ನು ಬುಧವಾರ ಪ್ರವೇಶಿಸಿದೆ. ತನ್ನ ಅಂಗಸಂಸ್ಥೆ ಫೋನ್‌ಪೆ ವೆಲ್ತ್‌ ಬ್ರೋಕಿಂಗ್‌ ಪ್ರೈವೇಟ್ ಲಿಮಿಟೆಡ್‌ ಮೂಲಕ ಈ ಸೇವೆಯನ್ನು ಆರಂಭಿಸಿದೆ.

‘ಷೇರ್‌ ಡಾಟ್ ಮಾರ್ಕೆಟ್‌’ ಮೊಬೈಲ್‌ ಆ್ಯಪ್‌ ಮತ್ತು ಜಾಲತಾಣದ ಮೂಲಕ ಡಿಸ್ಕೌಂಟ್‌ ಬ್ರೋಕಿಂಗ್ ಸೇವೆಗಳನ್ನು ನೀಡುವುದಾಗಿ ಕಂಪನಿ ಹೇಳಿದೆ.

ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಿಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಂದರರಾಮನ್‌ ರಾಮಮೂರ್ತಿ ಅವರು ‘ಷೇರ್‌ ಡಾಟ್‌ ಮಾರ್ಕೆಟ್‌’ ಬ್ರ್ಯಾಂಡ್‌ ಅನಾವರಣ ಮಾಡಿದರು.

ಸಣ್ಣ ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸಲು, ಇಂಟ್ರಾ–ಡೇ–ಟ್ರೇಡ್‌ ನಡೆಸಲು, ವೆಲ್ತ್‌ಬಾಸ್ಕೆಟ್‌ನಲ್ಲಿ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಈ ವೇದಿಕೆಯು ಅನುಕೂಲ ಮಾಡಿಕೊಡಲಿದೆ ಎಂದು ಕಂಪನಿ ತಿಳಿಸಿದೆ.

ತಂತ್ರಜ್ಞಾನ ಕೌಶಲ, ಪರಿಮಾಣಾತ್ಮಕ ಸಂಶೋಧನೆ, ಸ್ಪರ್ಧಾತ್ಮಕ ಡಿಸ್ಕೌಂಟ್‌ ಬ್ರೋಕಿಂಗ್‌ ಶುಲ್ಕದ ಮೂಲಕ ಷೇರು ಬ್ರೋಕಿಂಗ್‌ಗೆ ಹೊಸ ಆಯಾಮವನ್ನು ಷೇರ್‌ ಡಾಟ್‌ ಮಾರ್ಕೆಟ್‌ ನೀಡಲಿದೆ ಎಂದು ಅದರ ಸಿಇಒ ಉಜ್ವಲ್‌ ಜೈನ್‌ ತಿಳಿಸಿದರು.

ಬಳಕೆದಾರ ಸ್ನೇಹಿ ಇಂಟರ್‌ಫೇಸ್‌ ಮೂಲಕ ಜಾಗತಿಕ ಗುಣಮಟ್ಟದ ಪರಿಮಾಣಾತ್ಮಕ ಸಂಶೋಧನೆ ಆಧಾರಿತ ಹೂಡಿಕೆ ಸೇವೆಗಳ ಮೂಲಕ ಹೂಡಿಕೆದಾರರು ಮತ್ತು ವಹಿವಾಟುದಾರರು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹೊಸ ರೂಪ ಕೊಡಲು ಉದ್ದೇಶಿಸಲಾಗಿದೆ ಎಂದು ಷೇರ್‌ ಡಾಟ್‌ ಮಾರ್ಕೆಟ್‌ನ ಮುಖ್ಯ ಹೂಡಿಕೆ ಅಧಿಕಾರಿ (ಸಿಐಒ) ಸುಜಿತ್ ಮೋದಿ ಹೇಳಿದರು. 

ಶೀಘ್ರದಲ್ಲೇ ಗ್ರಾಹಕರಿಗೂ ಸಾಲ ನೀಡುವ ವ್ಯವಸ್ಥೆ ಆರಂಭವಾಗಲಿದೆ. ಸದ್ಯ ವ್ಯಾಪಾರಿಗಳಿಗೆ ಮಾತ್ರ ಈ ಸೌಲಭ್ಯ ಇದೆ
ಸಮೀರ್‌ ನಿಗಮ್ ಫೋನ್‌ಪೇ ಸ್ಥಾಪಕ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT