ನವದೆಹಲಿ: ಸ್ವದೇಶಿ ನಿರ್ಮಿತ ಪಿನಾಕ ರಾಕೆಟ್ ಉಡಾವಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯಾದೇಶವನ್ನು ಲಾರ್ಸೆನ್ ಆ್ಯಂಡ್ ಟೊಬ್ರೊ (ಎಲ್ ಆ್ಯಂಡ್ ಟಿ) ಕಂಪನಿಯು ಭಾರತೀಯ ಸೇನೆಯ ಕೋರ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕಾನಿಕಲ್ ಎಂಜಿನಿಯರ್ಸ್ನಿಂದ (ಇಎಂಇ) ಪಡೆದುಕೊಂಡಿದೆ.

ಆದರೆ, ಈ ಕಾರ್ಯಾದೇಶದ ಮೊತ್ತವನ್ನು ಎಲ್ ಆ್ಯಂಡ್ ಟಿ ಬಹಿರಂಗಪಡಿಸಿಲ್ಲ.

ಇಎಂಇ ಕೋರ್ ಜೊತೆಗಿನ ಈ ಪಾಲುದಾರಿಕೆಯು ಭಾರತೀಯ ಸೇನೆಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಪಿನಾಕ ರೆಜಿಮೆಂಟ್ಗಳು ದೀರ್ಘಕಾಲದವರೆಗೆ ಕಾರ್ಯಾಚರಣೆಗೆ ಲಭ್ಯವಾಗುವಂತೆ ಮಾಡುವ ಮತ್ತು ಅವುಗಳನ್ನು ಆಧುನೀಕರಿಸುವ ಗುರಿ ಹೊಂದಿದೆ ಎಂದು ಎಲ್ ಆ್ಯಂಡ್ ಟಿ ಕಂಪನಿಯು ಷೇರುಪೇಟೆಗೆ ಗುರುವಾರ ತಿಳಿಸಿದೆ.

ಈ ಕಾರ್ಯಾದೇಶವು ಹಳೆಯ ಬಿಡಿಭಾಗಗಳ ನಿರ್ವಹಣೆ, ಸೇನೆಯ ಕಾರ್ಯಾಗಾರಗಳಿಗೆ ನಿರಂತರ ತಾಂತ್ರಿಕ ಬೆಂಬಲವನ್ನು ಒದಗಿಸುವುದಕ್ಕೆ ಗಮನ ನೀಡುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.