ಕೋವಿಡ್ ಮೂರನೇ ಅಲೆ: ಸಜ್ಜಾಗುವಂತೆ ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಗೋಯಲ್ ಸೂಚನೆ

ನವದೆಹಲಿ: ಕೋವಿಡ್-19 ಮೂರನೇ ಅಲೆ ಎದುರಾದರೆ, ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಕ್ರಮಗಳ ಪಟ್ಟಿಯೊಂದನ್ನು ಸಿದ್ಧಪಡಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಕೈಗಾರಿಕಾ ರಂಗದ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.
ಸಾಂಕ್ರಾಮಿಕದಿಂದ ತೊಂದರೆಗೆ ಒಳಗಾಗಬಹುದಾದ ಮಕ್ಕಳಿಗೆ ಸಹಾಯ ಮಾಡುವಂತೆಯೂ ಗೋಯಲ್ ಅವರು ಸೂಚಿಸಿದ್ದಾರೆ. ಕೋವಿಡ್ನಿಂದಾಗಿ ಎದುರಾಗಿರುವ ಸವಾಲುಗಳನ್ನು ನಿಭಾಯಿಸಲು ಕೈಗಾರಿಕೆಗಳು ಎಷ್ಟರಮಟ್ಟಿಗೆ ಸನ್ನದ್ಧವಾಗಿವೆ ಎಂಬುದನ್ನು ಪರಿಶೀಲಿಸಲು ಗೋಯಲ್ ಅವರು ಮಂಗಳವಾರ ಸಭೆ ನಡೆಸಿದ್ದರು.
ಹಿಂದಿನ ಅನುಭವಗಳಿಂದ ಒಂದಿಷ್ಟು ಪಾಠ ಕಲಿತು ಈಗಿನ ಸಂದರ್ಭವನ್ನು ಹಾಗೂ ಮುಂದಿನ ಸವಾಲನ್ನು ಎದುರಿಸಬೇಕು ಎಂದು ಅವರು ಹೇಳಿದರು. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಸೇರಿದಂತೆ ಉದ್ಯಮಗಳ ಹಲವು ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ... ನಿವೃತ್ತಿ ನಂತರ ‘ಸೂಕ್ಷ್ಮ ವಿಚಾರ’ ಹಂಚಿಕೆ ಮೇಲೆ ನಿರ್ಬಂಧ: ಕೇಂದ್ರ ಸರ್ಕಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.