ಹುಬ್ಬಳ್ಳಿ: ಮಂಗಳವಾರ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಸೇರಿದ್ದ ಐದು ಸಾವಿರ ಪ್ರೇಕ್ಷಕರ ನಡುವೆ ಒಬ್ಬರು ಎಲ್ಲರ ಗಮನ ಸೆಳೆದರು. ಗಣ್ಯರ ಗ್ಯಾಲರಿಯಲ್ಲಿದ್ದ ಇಂಗ್ಲೆಂಡ್ನ ಪಾವ್ ಗಾರ್ವುಡಲ್ ಎಂಬ ಕ್ರಿಕೆಟ್ ಪ್ರೇಮಿ ಅವರು.

‘ಬಾಮಿ ಆರ್ಮಿ’ ಎಂಬ ಒಕ್ಕಣೆ ಮತ್ತು ಚಿತ್ರಗಳಿರುವ ಟೀಶರ್ಟ್ ಧರಿಸಿದ್ದ ಅವರು ಗಣ್ಯರ ಗ್ಯಾಲರಿಯಲ್ಲಿದ್ದರು. ದಿನದಾಟದ ಊಟದ ಸಮಯದಲ್ಲಿ ಮಾತಿಗೆಳೆದಾಗ ತಮ್ಮ ಕ್ರಿಕೆಟ್ ಪ್ರೀತಿ ಮತ್ತು ಪ್ರವಾಸದ ಕುರಿತು ಹೇಳಿದರು.

‘ಹೋದ ಗುರುವಾರದವರೆಗೂ ನನಗೆ ಹುಬ್ಬಳ್ಳಿಯ ಬಗ್ಗೆ ಗೊತ್ತಿರಲಿಲ್ಲ. ರಣಜಿ ಫೈನಲ್ ನೋಡಲು ಹುಬ್ಬಳ್ಳಿಗೆ ಬರುವ ಮಾರ್ಗ ತಿಳಿಯಲು ಗೂಗಲ್ನಲ್ಲಿ ಸುಮಾರು 20 ಸಾವಿರ ಸರ್ಚ್ಗಳನ್ನು ಮಾಡಿದೆ. ಕೊನೆಗೆ ಏರ್ ಇಂಡಿಯಾ ವಿಮಾನದ ಮೂಲಕ ಸೋಮವಾರ ಬಂದಿಳಿದೆ’ ಎಂದರು.

‘ನಾನು ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಭಾರತಕ್ಕೆ ಬಂದೆ. ಆದರೆ ದಿನಾಂಕಗಳು ಹೊಂದಾಣಿಕೆಯಾಗದ ಕಾರಣ ಹೆಚ್ಚು ಟಿ20 ಪಂದ್ಯಗಳನ್ನು ನೋಡಲಾಗಲಿಲ್ಲ. ಕ್ರಿಕೆಟ್ ವೆಬ್ಸೈಟ್ಗಳನ್ನು ನೋಡುವಾಗ ರಣಜಿ ಟ್ರೋಫಿ ಫೈನಲ್ ಇರುವುದರ ಕುರಿತು ತಿಳಿಯಿತು. 40 ಓವರ್ಗಳ ಆಟ ನೋಡುವ ಬದಲು ನಾಲ್ಕು ದಿನಗಳ ದೇಶಿ ಕ್ರಿಕೆಟ್ನ ಸೊಬಗು ಸವಿಯಲು ನಿರ್ಧರಿಸಿದೆ’ ಎಂದರು.

‘ಫೈನಲ್ನಲ್ಲಿ ಆಡುವ ಕರ್ನಾಟಕ ಮತ್ತು ಜಮ್ಮು–ಕಾಶ್ಮೀರ ತಂಡಗಳ ಕುರಿತು ಹೆಚ್ಚು ಮಾಹಿತಿ ನನ್ನ ಬಳಿ ಇರಲಿಲ್ಲ. ಬೆಂಗಳೂರಿನಲ್ಲಿ ಆಡಬಹುದು ಎಂದುಕೊಂಡಿದ್ದೆ. ಆದರೆ ನಾಲ್ಕು ದಿನಗಳ ಮುನ್ನ ಹುಬ್ಬಳ್ಳಿಯಲ್ಲಿ ಪಂದ್ಯ ಇರುವುದು ತಿಳಿಯಿತು. ದ್ವಿತೀಯ ದರ್ಜೆಯ ಸುಂದರವಾದ ಊರಿಗೆ ಬಂದೆ’ ಎಂದು ಪಾವ್ ಹೇಳಿದರು.

‘ಮೂರ್ನಾಲ್ಕು ವರ್ಷಗಳ ಹಿಂದೆ ಇಂದೋರ್ ಮತ್ತು ಧರ್ಮಶಾಲಾಗೆ ಹೋಗಿ ಪಂದ್ಯಗಳನ್ನು ವೀಕ್ಷಿಸಿದ್ದೆ. ಆಗಿನಿಂದ ಭಾರತಕ್ಕೆ ಬರುತ್ತಿದ್ದೇನೆ’ ಎಂದರು. ಇಂಗ್ಲೆಂಡ್ನಲ್ಲಿ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.