ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾನ್‌ ನ್ಯಾಷನಲ್‌ ಬ್ಯಾಂಕ್‌ಗೆ ₹7,500 ಕೋಟಿ ಲಾಭದ ಗುರಿ

Published 28 ಜನವರಿ 2024, 13:25 IST
Last Updated 28 ಜನವರಿ 2024, 13:25 IST
ಅಕ್ಷರ ಗಾತ್ರ

ನವದೆಹಲಿ: 2023–24ರ ಹಣಕಾಸು ವರ್ಷದಲ್ಲಿ ತನ್ನ  ಲಾಭವು ₹7000 ಕೋಟಿ– 7500 ಕೋಟಿಯಷ್ಟು ಇರಬಹುದು ಎಂದು ಈ ಹಿಂದಿನ ಅಂದಾಜನ್ನು ಪರಿಷ್ಕರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ತಿಳಿಸಿದೆ. 

ಈ ಹಿಂದೆ, ಬ್ಯಾಂಕ್‌ ತನ್ನ ಲಾಭವು ₹6 ಸಾವಿರ ಕೋಟಿ ಆಗಲಿದೆ ಎಂದು ಅಂದಾಜನ್ನು ಮಾಡಿತ್ತು. ಮೂರು ತ್ರೈಮಾಸಿಕದಲ್ಲಿ ನಿವ್ವಳ ಲಾಭವು ಶೇ 253ರಷ್ಟು ಹೆಚ್ಚಾಗಿದ್ದು, ಲಾಭವು ₹5,230 ಕೋಟಿ ದಾಟಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪರಿಷ್ಕೃತ ಅಂದಾಜಿನ ಪ್ರಕಾರ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ₹2 ಸಾವಿರ ಕೋಟಿಗಿಂತ ಹೆಚ್ಚಿರಲಿದೆ. ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹2,223 ಕೋಟಿ ಲಾಭ ಗಳಿಸಿದೆ.

2023–24ರ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ಈ ಹಿಂದೆ ಅಂದಾಜಿಸಿದ್ದ ನಿವ್ವಳ ಲಾಭದ ಗುರಿ ₹6 ಸಾವಿರ ಕೋಟಿಯನ್ನು ಪರಿಷ್ಕರಿಸಿದೆ. ಲಾಭವು ₹7000 ಕೋಟಿ– ₹7,500 ಕೋಟಿ ಆಗಲಿದೆ ಎಂದು ಈಗ ಅಂದಾಜಿಸಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅತುಲ್‌ ಕುಮಾರ್‌ ಗೋಯಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT