ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷೆ ಕಾರು ಮಾರಾಟ ಶೇ 15ರಷ್ಟು ಹೆಚ್ಚಳ

Published 7 ಮೇ 2024, 14:37 IST
Last Updated 7 ಮೇ 2024, 14:37 IST
ಅಕ್ಷರ ಗಾತ್ರ

ನವದೆಹಲಿ: ಐಷಾರಾಮಿ ಸ್ಪೋರ್ಟ್ಸ್‌ ಕಾರು ತಯಾರಿಕಾ ಕಂಪನಿ ಪೋಷೆ ಇಂಡಿಯಾ 2024ರ ಮೊದಲ ತ್ರೈಮಾಸಿಕದಲ್ಲಿ 244 ಕಾರುಗಳನ್ನು ಮಾರಾಟ ಮಾಡಿದೆ. 

ಹಿಂದಿನ ವರ್ಷದ ಇದೇ ಅವಧಿಯಲ್ಲಿ 213 ಕಾರುಗಳನ್ನು ಮಾರಾಟ ಮಾಡಿತ್ತು. ಈ ಮಾರಾಟಕ್ಕೆ ಹೋಲಿಸಿದರೆ ಶೇ 15ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.

2023ರಲ್ಲಿ ಕಂಪನಿಯ 914 ಕಾರುಗಳು ಮಾರಾಟವಾಗಿದ್ದರೆ, 2022ರಲ್ಲಿ 779 ಕಾರು ಮಾರಾಟವಾಗಿದ್ದವು. ಹಲವಾರು ಹೊಸ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿ, ಮಾರಾಟವನ್ನು ವಿಸ್ತರಿಸಲು ಯೋಜಿಸಿದೆ ಎಂದು ಕಂಪನಿಯು ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT