ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ವಲ ಯೋಜನೆ: 5 ಕೋಟಿ ಸಂಪರ್ಕ

Last Updated 3 ಆಗಸ್ಟ್ 2018, 15:44 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (ಪಿಎಂಯುವೈ) ಬಡ ಕುಟುಂಬಗಳಿಗೆ ವಿತರಿಸುವ ಅಡುಗೆ ಅನಿಲ ಸಿಲಿಂಡರುಗಳ (ಎಲ್‌ಪಿಜಿ) ಸಂಖ್ಯೆಯು 5 ಕೋಟಿಗೆ ತಲುಪಿದೆ.

ಶುಕ್ರವಾರ ಇಲ್ಲಿ ನಡೆದ ಸಮಾರಂಭದಲ್ಲಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ ಅವರು, ಈ ಯೋಜನೆಯ 5 ಕೋಟಿಯ ಫಲಾನುಭವಿಯಾಗಿರುವದೆಹಲಿ ನಿವಾಸಿ ತಕ್ರದಿರನ್‌ ಅವರಿಗೆ ಎಲ್‌ಪಿಜಿ ಸಂಪರ್ಕ ವಿತರಿಸಿದರು.

ಈ ಗುರಿ ಸಾಧಿಸಲು ಶ್ರಮಿಸಿದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಾದ ಐಒಸಿ, ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ ಸಿಬ್ಬಂದಿಯ ಕಾರ್ಯವೈಖರಿಯನ್ನು ಮಹಾಜನ್‌ ಅವರು ಶ್ಲಾಘಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2016ರ ಮೇ 1ರಂದು ಈ ಯೋಜನೆಗೆ ಚಾಲನೆ ನೀಡಿದ್ದರು. 2019ರ ಮಾರ್ಚ್‌ ಅಂತ್ಯದ ವೇಳೆಗೆ ಠೇವಣಿ ಇಲ್ಲದೇ ಉಚಿತವಾಗಿ 5 ಕೋಟಿಗಳಷ್ಟು ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಗುರಿ ನಿಗದಿಪಡಿಸಲಾಗಿತ್ತು. ಅವಧಿಗೆ ಮುಂಚೆಯೇ ಈ ಗುರಿ ಸಾಧಿಸಲಾಗಿದೆ. ಫಲಾನುಭವಿಗಳಲ್ಲಿ ಶೇ 47ರಷ್ಟು ಜನರು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ್ದಾರೆ.

ಯೋಜನೆಯ ಯಶಸ್ಸಿನಿಂದಾಗಿ ಈಗ ಗುರಿಯನ್ನು 8 ಕೋಟಿಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ ₹ 12,800 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಬಡ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನ ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT