ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 27 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಎಚ್. ನರಸಿಂಹಲು

GPF- PPF ವ್ಯತ್ಯಾಸವೇನು, ಯಾವುದು ಹೆಚ್ಚಿನ ವರಮಾನ ತರುತ್ತದೆ ಹಾಗೂ ಮೊದಲು ಸಿಗುತ್ತದೆ. ಇವು ಸೆಕ್ಷನ್ 80C ಒಳಗೆ ಬರುತ್ತಿದೆಯೇ ತಿಳಿಸಿರಿ.

ಉತ್ತರ: GPF - Govt provident fund, PPF- Public Provident Fund. ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿ ಕಡಿತವಾಗುವುದು GPF. ನೌಕರರಲ್ಲದ ಇತರರು (Ginival Public) ಇದೇ ಮಾದರಿಯಲ್ಲಿ ಮಾಡಬಹುದು. ತತ್ವ ಒಂದೇ ಇದ್ದು ಇವೆರಡೂ, ಸೆಕ್ಷನ್ 80C ಒಳಗೆ ಬರುತ್ತದೆ. ಲಾಭದ ದೃಷ್ಟಿಯಿಂದ ಕೂಡಾ ವ್ಯತ್ಯಾಸವಿಲ್ಲ.GPF ನೌಕರಿ ಅಂತ್ಯಕ್ಕೆ ಸಿಗುತ್ತದೆ. PPF 15 ವರ್ಷಗಳಲ್ಲಿ ಸಿಗುತ್ತದೆ. ಇವೆರಡರಲ್ಲಿ ಬರುವ ಬಡ್ಡಿ ಸೆಕ್ಷನ್ 10 (II) ಆಧಾರದ ಮೇಲೆ ವಿನಾಯಿತಿ ಹೊಂದಿದೆ.

ಪ್ರವೀಣ್, ಧಾರವಾಡ

ನಾನು ಧಾರವಾಡದ kcc Bank ನಲ್ಲಿ₹ 5 ಲಕ್ಷ ಠೇವಣಿ ಇರಿಸಿದ್ದೇನೆ. ಇದು ಆರ್‌ಬಿಐ ವ್ಯಾಪ್ತಿಗೆ ಬರುತ್ತದೆಯೇ ತಿಳಿಸಿರಿ.

ಉತ್ತರ: Karnataka Central Co Oparative Bank, Dharawad ರಾಜ್ಯ ಸರ್ಕಾರ ಸ್ವಾಮ್ಯದ ಬ್ಯಾಂಕ್ ಹಾಗೂ ಆರ್.ಬಿ.ಐ. ಈ ಬ್ಯಾಂಕಿನ ಲೆಕ್ಕ ಪತ್ರವನ್ನು ಪ‍ರಿಶೀಲಿಸುತ್ತದೆ. ನೀವು ಇಟ್ಟ ಹಣಕ್ಕೆ ತೊಂದರೆಯಾಗಲಾರದು. ನೀವು ಬಯಸಿದಲ್ಲಿ ಎಲ್ಲಾ ನಿಮ್ಮ ಉಳಿತಾಯ ಒಂದೇ ಕಡೆ ಇರುವುದಕ್ಕಿಂತ 3–4 ಬ್ಯಾಂಕುಗಳಲ್ಲಿ ಇರಿಸಿರಿ. ಆದರೆ KCC Bank ನಲ್ಲಿ ಇರಿಸಿದ ಹಣಕ್ಕೆ ಭಯಪಡುವುದು ಬೇಡ.

ಎ.ಎನ್. ಪಿ. ಶಾಸ್ತ್ರಿ, ಚಿಕ್ಕಬಳ್ಳಾಪುರ

ನನ್ನ ವಯಸ್ಸು 81. ಪಿಂಚಣಿ₹ 2,47,549. ಬ್ಯಾಂಕಿನಿಂದ ಪಡೆದ ಬಡ್ಡಿ₹ 61,938. ನಾನು 15H ಕೊಡದ ಕಾರಣ SBI ಶೇ 10ರಷ್ಟು ಬಡ್ಡಿ₹ 1,975 ಮುರಿದಿರುತ್ತಾರೆ. ಈ ಹಣ ವಾಪ‍ಸ್‌ ಪಡೆಯಬಹುದೇ?

ಉತ್ತರ: ಪ್ರತೀ ವರ್ಷ15H ನಮೂನೆ ಫಾರಂ ಏಪ್ರಿಲ್ 15 ರೊಳಗೆ ಬ್ಯಾಂಕ್‌ಗೆ ಸಲ್ಲಿಸಿ, ಮೂಲ ಬಡ್ಡಿಯಲ್ಲಿ ತೆರಿಗೆ ಮುರಿಯದಂತೆ ನೋಡಿಕೊಳ್ಳಿರಿ. ನೀವು ಹೀಗೆ ಮಾಡಿದಲ್ಲಿ, ಮುಂದೆ ನಿಮಗೆ ಟಿ.ಡಿ.ಎಸ್. ಭಯವಿರುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯಕತೆ ಇರುವುದಿಲ್ಲ. ಈಗಾಗಲೇ ಮುರಿದಿರುವ ಬಡ್ಡಿ₹ 1,975 ರಿಟರ್ನ್ ತುಂಬಿ ವಾಪಸ್ ಪಡೆಯಬಹುದು. ನಿಮ್ಮ ಪಿಂಚಣಿ ಹಾಗೂ ಬಡ್ಡಿ ಆದಾಯ ₹ 5 ಲಕ್ಷ ತನಕ ನಿಮಗೆ ಯಾವ ತೆರಿಗೆಯ ಭಯವೂ ಇಲ್ಲ. ಜೊತೆಗೆ ಸೆಕ್ಷನ್ 16 ಆಧಾರದ ಮೇಲೆ ಸ್ಟ್ಯಾಂಡರ್ಡ್ ಡಿಡಕ್ಷನ್₹ 50,000 ಹಾಗೂ ಸೆಕ್ಷನ್ 80TTB ಆಧಾರದ ಮೇಲೆ ಬ್ಯಾಂಕ್‌ ಠೇವಣಿ ಬಡ್ಡಿ ಮೇಲೆ₹ 50,000 ಮಿತಿ ಹೊರತುಪಡಿಸಿ ವಿನಾಯಿತಿ ಪಡೆಯಬಹುದು.

ಹೆಸರು ಬೇಡ, ಬಾಗಲಕೋಟೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕ. ವಯಸ್ಸು 55. ಒಟ್ಟಾರೆ ಕಡಿತದ ನಂತರ
₹ 30,697 ಸಂಬಳ ಕೈಗೆ ಸಿಗುತ್ತದೆ. ನಾನು ನಿವೇಶನ ಖರೀದಿಸಿ, ಸಾಲ ಮಾಡಿ ಮನೆ ಕಟ್ಟಿಸಬೇಕೇ ಅಥವಾ ನಿವೃತ್ತಿಯ ನಂತರ ಈ ಕಾರ್ಯ ಮಾಡಲೇ ತಿಳಿಸಿರಿ.

ಉತ್ತರ: ಬಾಗಲಕೋಟೆಯಲ್ಲಿ ನಿವೇಶನ ಹಾಗೂ ಮನೆ ನಿರ್ಮಿಸಲು ಕನಿಷ್ಠ₹ 40 ಲಕ್ಷ ಬೇಕಾದೀತು. ನೀವು 5 ವರ್ಷಗಳಲ್ಲಿ ನಿವೃತ್ತರಾಗುವುದರಿಂದ, ದೀರ್ಘಾವದಿ ಗೃಹಸಾಲ ಪಡೆಯುವಂತಿಲ್ಲ. ನಿಮ್ಮೊಡನೆ ಏನಾದರೂ ಉಳಿತಾಯ ಇದ್ದರೆ, ಸ್ವಲ್ಪ ವೈಯಕ್ತಿಕ ಬ್ಯಾಂಕ್ ಸಾಲ ಪಡೆದು ನಿವೇಶನ ಕೊಳ್ಳಿರಿ. ನಿವೃತ್ತಿಯಿಂದ ಬರುವ ದೊಡ್ಡ ಮೊತ್ತದಲ್ಲಿ ಮನೆ ಕಟ್ಟಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT