ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಅಮೆರಿಕದಲ್ಲಿ ಸಂಪಾದನೆ, ಭಾರತದಲ್ಲಿ ಉಳಿತಾಯ: ಇಲ್ಲಿದೆ ದಾರಿ

Last Updated 4 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನಾನು ಮೂಲತಃ ಗದಗದ ಬೆಟಗೇರಿಯವನು. ಧಾರವಾಡದಲ್ಲಿ ಬಿ.ಇ ಮಾಡಿ ಇಲ್ಲಿ ಎಂ.ಎಸ್‌. ಮಾಡಿ, ಅಮೆರಿಕದಲ್ಲಿ ಕೆಲಸಕ್ಕೆ ಸೇರಿದ್ದೇನೆ. ನನ್ನ ಇಲ್ಲಿಯ ಉಳಿತಾಯವನ್ನು ಭಾರತದಲ್ಲಿ ಇರಿಸಲು ಮಾರ್ಗದರ್ಶನ ಮಾಡಿ. ನಾನು ಪ್ರಜಾವಾಣಿ ಪತ್ರಿಕೆಯನ್ನು ಇಂಟರ್‌ನೆಟ್‌ ಮೂಲಕ ಓದುತ್ತೇನೆ. ನಾನು ನಿಮ್ಮ ಅಭಿಮಾನಿ.

ನಾಗರಾಜ, ಅಮೆರಿಕ

ಉತ್ತರ: ನಿಮ್ಮ ಅಭಿಮಾನಕ್ಕೆ ವಂದನೆಗಳು. ನೀವು ಅಮೆರಿಕದಲ್ಲಿ ಇದ್ದು, ಪ್ರಜಾವಾಣಿ ಓದುತ್ತಿರುವುದು ನನಗೆ ಖುಷಿ ತಂದಿದೆ. ನೀವು ಗದಗದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ NRE SB account ಪ್ರಾರಂಭಿಸಿ. ಈ ಖಾತೆಗೆ ನಿಮ್ಮ ಅಮೆರಿಕ ಬ್ಯಾಂಕ್‌ ಖಾತೆಯಿಂದ ಆನ್‌ಲೈನ್‌ನಲ್ಲಿ ಡಾಲರ್‌ ಅನ್ನು ರೂಪಾಯಿಗೆ ವರ್ಗಾಯಿಸಿ ಕಳುಹಿಸಬಹುದು. ಉಳಿತಾಯ ಖಾತೆಯಲ್ಲಿ ಸ್ವಲ್ಪ ಹಣ ಇರಿಸಿ, ಉಳಿದ ಹಣ SBIನಲ್ಲಿ ಅವಧಿ ಠೇವಣಿಗೆ ವರ್ಗಾಯಿಸಬಹುದು. ಇದನ್ನು NRE TERM DEPOSIT ಎನ್ನುತ್ತಾರೆ. ನೀವು ಎಸ್‌ಬಿಐನಲ್ಲಿ ಒಮ್ಮೆಲೆ ಬಡ್ಡಿ ಬರುವ Re-investment NRE Deposit ಮಾಡಿ.

ನೀವು ಇಚ್ಛಿಸಿದಲ್ಲಿ, ಯುಎಸ್‌ಎನಲ್ಲಿ ನೀವು ಪಡೆಯುವ ಡಾಲರ್‌ ಅನ್ನು ಭಾರತದಲ್ಲಿ ಡಾಲರಿನಲ್ಲಿಯೂ ಅವಧಿ ಠೇವಣಿ ಮಾಡಲು ಅವಕಾಶ ಇದೆ. ಇದನ್ನು FCNR Deposit ಎನ್ನುತ್ತಾರೆ. ಎನ್‌ಆರ್‌ಇ –ಎಸ್‌ಬಿ ಖಾತೆ ನಿಮ್ಮ ಸಮೀಪದ ಸಂಬಂಧಿಗಳ ಜತೆ (ತಂದೆ–ತಾಯಿ, ಅಣ್ಣ, ತಮ್ಮ ಇತ್ಯಾದಿ) ಜಂಟಿ ಖಾತೆ ಮಾಡಲು ಬರುತ್ತದೆ.

ಈ ಖಾತೆಯಿಂದ ಹಣ ತೆಗೆಯಬಹುದಾದರೂ ಭಾರತದಲ್ಲಿ ರೂಪಾಯಿಯಿಂದ ಜಮಾ ಮಾಡಲು ಸಾಧ್ಯವಿಲ್ಲ. ಏನೇ ಜಮಾ ಆದರೂ ಯುಎಸ್‌ಎನಿಂದಲೇ ನೀವು ಜಮಾ ಮಾಡತಕ್ಕದ್ದು. ಈ ಖಾತೆಯಲ್ಲಿರುವ ಹಣ ನೀವು ಬಯಸಿದಲ್ಲಿ ವಾಪಸ್‌ ಅಮೆರಿಕಕ್ಕೆ ಡಾಲರ್‌ನಲ್ಲಿ ತರಿಸಬಹುದು. ಇದನ್ನು REPATRIATION ಎನ್ನುತ್ತಾರೆ. ಅವಶ್ಯವಿದ್ದರೆ ನನಗೆ (ಮೊ 94480 15300) ಕರೆ ಮಾಡಿ.

ಅವಧಿ ಠೇವಣಿ ಒಂದು ವರ್ಷಕ್ಕಿಂತ ಕಡಿಮೆ ಇರಿಸುವಂತಿಲ್ಲ. ಅವಧಿಗೆ ಮುನ್ನ ಪಡೆದರೆ ಬಡ್ಡಿ ಬರುವುದಿಲ್ಲ. ನೀವು ಅನಿವಾಸಿ ಭಾರತೀಯರಾಗಿರುವ ತನಕ ಭಾರತದಲ್ಲಿ ನೀವು ಮಾಡಿರುವ ಠೇವಣಿಗೆ ಮೇಲೆ ಬರುವ ಬಡ್ಡಿಗೆ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT