ಸೋಮವಾರ, ಮಾರ್ಚ್ 20, 2023
30 °C

ಚಿನ್ನದ ದರ ₹526 ಹೆಚ್ಚಳ; ಬೆಳ್ಳಿ ಧಾರಣೆಯೂ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂಗೆ ₹ 526ರಷ್ಟು ಹೆಚ್ಚಳ ಕಂಡಿದ್ದು, ₹ 46,310ರಂತೆ ಮಾರಾಟವಾಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯು ದೇಶೀಯ ವಹಿವಾಟಿನಲ್ಲಿ ಪ್ರತಿಫಲಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ವಿಶ್ಲೇಷಿಸಿದೆ.

ಇಂದು ಬೆಳ್ಳಿ ಧಾರಣೆ ಕೆ.ಜಿ.ಗೆ ₹ 1,231ರಷ್ಟು ಏರಿಕೆಯಾಗಿ ₹ 68,654ಕ್ಕೆ ತಲುಪಿದೆ. ಬುಧವಾರದ ವಹಿವಾಟಿನಲ್ಲಿ ಬೆಳ್ಳಿ ಕೆ.ಜಿ.ಗೆ ₹ 60ರಷ್ಟು ಇಳಿಕೆ ಕಂಡು ₹ 67,473ರಲ್ಲಿ ವಹಿವಾಟು ಮುಕ್ತಾಯವಾಗಿತ್ತು. ಚಿನ್ನದ ದರ 10 ಗ್ರಾಂಗೆ ₹ 264ರಷ್ಟು ಇಳಿಕೆ ಆಗಿ ₹ 45,784 ತಲುಪಿತ್ತು.

'ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಆಗಿರುವುದರಿಂದ (ಕಾಮೆಕ್ಸ್‌) ದೆಹಲಿಯಲ್ಲಿ 24 ಕ್ಯಾರೆಟ್‌ ಚಿನ್ನದ ಮೌಲ್ಯ 10 ಗ್ರಾಂಗೆ ₹526ರಷ್ಟು ಹೆಚ್ಚಳ ಕಂಡಿದೆ' ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ಹೇಳಿದ್ದಾರೆ.

ಇದನ್ನೂ ಓದಿ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ₹ 25.50 ಹೆಚ್ಚಳ: ಇಂದಿನಿಂದಲೇ ಜಾರಿ

ಅಮೆರಿಕದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ 5 ಪೈಸೆ ಕುಸಿದು, ₹ 74.37ರಲ್ಲಿ ವಹಿವಾಟು ನಡೆಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನಕ್ಕೆ 1,778 ಅಮೆರಿಕನ್‌ ಡಾಲರ್‌ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು