ನವದೆಹಲಿ: 2024–25ನೇ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳ ನಿವ್ವಳ ಲಾಭವು ₹1.5 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ.

ವಸೂಲಾಗದ ಸಾಲದ (ಎನ್ಪಿಎ) ಪ್ರಮಾಣ ಕುಗ್ಗಿರುವುದು ಹಾಗೂ ಸಾಲ ನೀಡಿಕೆಯಲ್ಲಿ ಎರಡಂಕಿ ದಾಟಿರುವುದು ಲಾಭ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಸದ್ಯ ಬ್ಯಾಂಕ್ಗಳಲ್ಲಿ ಠೇವಣಿ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಈ ನಡುವೆಯೂ ಲಾಭದ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳು ₹85,520 ಕೋಟಿ ನಿವ್ವಳ ಲಾಭ ಗಳಿಸಿವೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹68,500 ಕೋಟಿ ಲಾಭ ಗಳಿಸಿದ್ದವು. ಹಾಗಾಗಿ, ದ್ವಿತೀಯಾರ್ಧದಲ್ಲಿ ಲಾಭ ಗಳಿಕೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

2023–24ನೇ ಆರ್ಥಿಕ ವರ್ಷದಲ್ಲಿ ಈ ಬ್ಯಾಂಕ್ಗಳು ₹1.41 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿದ್ದವು. ಈ ಅವಧಿಯಲ್ಲಿ ಸಾಲ ಮರುಪಾವತಿ, ಎನ್ಪಿಎ ಪ್ರಮಾಣ ಇಳಿಕೆಯಿಂದಾಗಿ ಬ್ಯಾಂಕ್ಗಳ ಆಸ್ತಿಯ ಗುಣಮಟ್ಟ ಸುಧಾರಣೆ ಕಂಡಿತ್ತು. ಬ್ಯಾಂಕ್ಗಳ ಸಮರ್ಪಕ ಬಂಡವಾಳ ಅನುಪಾತವು (ಸಿಎಆರ್) ಉತ್ತಮವಾಗಿತ್ತು. ಇದರಿಂದ ನಿವ್ವಳ ಲಾಭದಲ್ಲಿ ಏರಿಕೆಯಾಗಿತ್ತು.

2018ರ ಮಾರ್ಚ್ನಲ್ಲಿ ಈ ಬ್ಯಾಂಕ್ಗಳ ವಸೂಲಾಗದ ಸಾಲದ (ಎನ್ಪಿಎ) ಸರಾಸರಿ ಪ್ರಮಾಣ ಶೇ 14.58ಕ್ಕೆ ಮುಟ್ಟಿತ್ತು. ಪ್ರಸಕ್ತ ವರ್ಷದ ಸೆಪ್ಟೆಂಬರ್ನಲ್ಲಿ ಶೇ 3.12ಕ್ಕೆ ಇಳಿದಿದೆ. ಇದು ಬ್ಯಾಂಕ್ಗಳು ನಿಗದಿತ ಗುರಿ ಸಾಧನೆಗೆ ನೆರವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ನಿಯಮಾವಳಿ ಅನ್ವಯ ಬ್ಯಾಂಕ್ಗಳ ಸುರಕ್ಷತೆಯ ಮಾನದಂಡವಾದ ಬಂಡವಾಳ ಪರ್ಯಾಪ್ತತಾ ಅನುಪಾತ (ಸಿಆರ್ಎಆರ್) ಶೇ 11.5ರಷ್ಟು ಇರಬೇಕು. 2015ರ ಮಾರ್ಚ್ನಲ್ಲಿ ಬ್ಯಾಂಕ್ಗಳ ಸಿಆರ್ಎಆರ್ ಶೇ 11.45ರಷ್ಟು ಇದ್ದಿದ್ದು, ಪ್ರಸಕ್ತ ವರ್ಷದ ಸೆಪ್ಟೆಂಬರ್ನಲ್ಲಿ ಶೇ 15.43ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಒಟ್ಟಾರೆ ಶೇ 3.98ರಷ್ಟು ಹೆಚ್ಚಳವಾಗಿದೆ. ಇದು ಬ್ಯಾಂಕ್ಗಳ ಆರ್ಥಿಕ ಸ್ಥಿತಿಯು ಸುಧಾರಣೆಗೊಂಡಿರುವ ಸೂಚಕವಾಗಿದೆ.

‘ಫೆಬ್ರುವರಿಯಲ್ಲಿ ನಡೆಯಲಿರುವ ಆರ್ಬಿಐನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರ ಕಡಿತಗೊಳ್ಳುವ ಸಾಧ್ಯತೆಯಿದೆ. ಇದರಿಂದ ಬ್ಯಾಂಕ್ಗಳು ಠೇವಣಿ ಮೇಲಿನ ಬಡ್ಡಿದರ ಇಳಿಕೆ ಮಾಡುವ ನಿರೀಕ್ಷೆಯಿದೆ. ಹಾಗಾಗಿ, 2025–26ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ಗಳ ಎಷ್ಟು ಪ್ರಮಾಣದಲ್ಲಿ ಸಾಲ ನೀಡಲಿವೆ ಎಂಬುದನ್ನು ಅವಲೋಕಿಸುತ್ತಿದ್ದೇವೆ’ ಎಂದು ಐಸಿಆರ್ಎ ಉಪಾಧ್ಯಕ್ಷ ಸಚಿನ್ ಸಚ್ದೇವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.